ADVERTISEMENT

ಕೊರೊನಾ: ಆಸ್ಟ್ರೇಲಿಯಾ ಮತ್ತು ಸ್ಪೇನ್ ವಿದೇಶಾಂಗ ಸಚಿವರ ಜತೆ ಜೈಶಂಕರ್ ಮಾತುಕತೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 6:58 IST
Last Updated 9 ಏಪ್ರಿಲ್ 2020, 6:58 IST
ಜೈಶಂಕರ್
ಜೈಶಂಕರ್   

ನವದೆಹಲಿ: ಕೊರೊನಾವೈರಸ್ ಲಾಕ್‍ಡೌನ್‌ನಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಯಾವ ರೀತಿ ಎದುರಿಸಬಹುದು ಎಂಬುದರ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆಮರೀಸ್ ಪೈನ್ ಜತೆ ಫೋನ್ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಸ್ಪೇನ್‌ನ ವಿದೇಶಾಂಗ ಸಚಿವೆಅರಂಚ ಗೊಸ್ಜಾಲೇಜ್‌ ಜತೆಯೂ ಜೈಶಂಕರ್ದೂರವಾಣಿ ಸಂಭಾಷಣೆ ನಡೆಸಿದ್ದಾರೆ.

ಈ ಬಗ್ಗೆ ಬುಧವಾರ ಟ್ವೀಟಿಸಿದ ಜೈಶಂಕರ್, ಕೋವಿಡ್ ನಿಯಂತ್ರಣಕ್ಕಾಗಿ ಜಾಗತಿಕ ಸಹಕಾರ ಬೇಕಿದೆ ಎಂಬುದನ್ನು ನಾವು ಒಪ್ಪಿದ್ದೇವೆ. ಸ್ಪೇನ್‌ಗೆ ಅಗತ್ಯ ಔಷಧಿಗಳ ಪೂರೈಕೆಗೆ ಭಾರತ ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ ಎಂದಿದ್ದಾರೆ.

ಕೊರೊನಾವೈರಸ್ ಸೋಂಕು ಹರಡುವಿಕೆಯ ನಿಯಂತ್ರಣದ ಬಗ್ಗೆ ಆಯಾ ಸರ್ಕಾರಗಳು ಅನುಸರಿಸುತ್ತಿರುವ ದೇಶೀಯ ಪ್ರತಿಕ್ರಿಯೆ ,ತಂತ್ರಗಳ ಬಗ್ಗೆ ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಚರ್ಚಿಸಿದ್ದರು.ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಭಾಗಿತ್ವದ ಸಂಶೋಧನಾ ಪ್ರಯತ್ನಗಳ ಮೂಲಕ ದ್ವಿಪಕ್ಷೀಯ ಅನುಭವ-ಹಂಚಿಕೆಯ ಮಹತ್ವವನ್ನು ಉಭಯ ನಾಯಕರು ಒಪ್ಪಿಕೊಂಡ ಬೆನ್ನಲ್ಲೇ ಜೈಶಂಕರ್, ಪೈನ್ ಜತೆ ಚರ್ಚೆ ನಡೆಸಿದ್ದಾರೆ.

ADVERTISEMENT

ಈ ಬಗ್ಗೆ ಟ್ವೀಟ್ ಮಾಡಿದ ಜೈಶಂಕರ್, ಔಷಧಿಗಾಗಿ ಆಸ್ಟ್ರೇಲಿಯಾದ ಬೇಡಿಕೆಗೆ ಭಾರತ ಧನಾತ್ಮಕ ಪ್ರತಿಕ್ರಿಯೆ ನೀಡಿದೆ. ಅಂದಹಾಗೆ ಆ್ಯಂಟಿ ಮಲೇರಿಯಾ ಔಷಧಿ ಹೈಡ್ರಾಕ್ಸಿಕ್ಲೋರೊಕ್ವಿನ್‌ನ್ನುಭಾರತ ಆಸ್ಟ್ರೇಲಿಯಾಗೂ ಕಳಿಸಿಕೊಡಲಿದೆಯೇ ಎಂಬುದರ ಬಗ್ಗೆ ಜೈಶಂಕರ್ ಸ್ಪಷ್ಟವಾಗಿ ಹೇಳಲಿಲ್ಲ.

ಕೋವಿಡ್-19 ಬಗ್ಗೆ ಆಸ್ಟ್ರೇಲಿಯಾದ ವಿದೇಶಾಂಗಸಚಿವರೊಂದಿಗಿನ ಮಾತುಕತೆ ನಡೆದಿದ್ದು, ಆಸ್ಟ್ರೇಲಿಯಾದಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಆಕೆ ಭರವಸೆ ನೀಡಿರುವುದಾಗಿಜೈಶಂಕರ್ ಟ್ವೀಟಿಸಿದ್ದಾರೆ.

ಸರಿಸುಮಾರು 80,000 ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾದಲ್ಲಿ ಕಲಿಯುತ್ತಿದ್ದಾರೆ. ಅಲ್ಲಿರುವವರು ತಾಯ್ನಾಡಿಗೆ ಮರಳುವುದಾದರೆ ಅವರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಲಾಗುವುದು. ಆಸ್ಟ್ರೇಲಿಯಾಗೆ ಬೇಕಾಗಿರುವ ಔಷಧಿ ಬಗ್ಗೆ ನಾವು ಧನಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದೇವೆ ಎಂದಿದ್ದಾರೆ ಜೈಶಂಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.