ADVERTISEMENT

ಬಿಪಿನ್‌ ರಾವತ್‌ ಸಾವಿನ ಬಗ್ಗೆ ಕಾಮೆಂಟ್‌: ಬ್ಯಾಂಕ್‌ ಉದ್ಯೋಗಿ ಅಮಾನತು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 15:42 IST
Last Updated 10 ಡಿಸೆಂಬರ್ 2021, 15:42 IST
ಬಿಪಿನ್‌ ರಾವತ್‌
ಬಿಪಿನ್‌ ರಾವತ್‌    

ಶ್ರೀನಗರ: ಹೆಲಿಕಾಪ್ಟರ್‌ ಪತನದ ದುರಂತದಲ್ಲಿ ಮೃತಪಟ್ಟ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್‌ ಬಿಪಿನ್‌ ರಾವತ್‌ ಅವರ ಸಾವಿಗೆ ಅವಹೇಳನಾಕಾರಿ ಕಾಮೆಂಟ್‌ ಮಾಡಿದ್ದ ಬ್ಯಾಂಕ್‌ನ ಮಹಿಳಾ ನೌಕರರೊಬ್ಬರನ್ನು ಶುಕ್ರವಾರ ಅಮಾನತು ಮಾಡಲಾಗಿದೆ.

ಸರ್ಕಾರಿ ಸ್ವಾಮ್ಯದ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ನ ಉದ್ಯೋಗಿಯಾಗಿರುವ ಅಫ್ರೀನ್‌ ಹಸನ್‌ ನಕಾಶ್‌ ಅಮಾನತುಗೊಂಡವರು. ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಅಫ್ರೀನ್‌, ಫೇಸ್‌ಬುಕ್‌ನಲ್ಲಿ ಬಿಪಿನ್‌ ರಾವತ್‌ ಅವರ ಸಾವಿನ ಫೋಸ್ಟ್‌ವೊಂದಕ್ಕೆ ನಗುವ ಎಮೋಜಿ ಹಾಕಿದ್ದರು. ಇದನ್ನು ಗಂಭೀರವಾಗಿರುವ ಪರಿಗಣಿಸಿರುವ ಬ್ಯಾಂಕ್‌, ಅಫ್ರೀನ್‌ಳ ವಿರುದ್ಧ ಶಿಸ್ತುಕ್ರಮ ಕೈಗೊಂಡಿದೆ.

‘ಸರ್ಕಾರಿ ನೌಕರರು ಸಾಮಾಜಿಕ ಜಾಲತಾಣಗಳ ಬಳಕೆ ಕುರಿತು ಆಗಾಗ್ಗೆ ಸುತ್ತೋಲೆಗಳನ್ನು ಹೊರಡಿಸಿದ್ದರೂ ಮಹಿಳಾ ಸಿಬ್ಬಂದಿಯು ಸಾಮಾಜಿಕ ಜಾಲತಾಣದಲ್ಲಿ ದುರ್ವತನೆ ತೋರಿದ್ದಾರೆ. ಹಾಗಾಗಿ ಶಿಸ್ತುಕ್ರಮವನ್ನು ಕಾಯ್ದಿರಿಸಿ ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ನ ಮಾನವ ಸಂಪನ್ಮೂಲ ವಿಭಾಗವು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.