ADVERTISEMENT

ಜಮ್ಮು–ಕಾಶ್ಮೀರ ಐಪಿಎಸ್‌ ಅಧಿಕಾರಿ ಬಸಂತ್‌ ಕುಮಾರ್‌ ರಾಜೀನಾಮೆ

ರಾಜಕೀಯಕ್ಕೆ ಸೇರುವ ಉದ್ದೇಶ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 12:56 IST
Last Updated 26 ಜೂನ್ 2022, 12:56 IST
ಚಿತ್ರ ಕೃಪೆ – ಬಸಂತ್‌ ಕುಮಾರ್‌ ಅವರ ಫೇಸ್‌ಬುಕ್ ಖಾತೆ
ಚಿತ್ರ ಕೃಪೆ – ಬಸಂತ್‌ ಕುಮಾರ್‌ ಅವರ ಫೇಸ್‌ಬುಕ್ ಖಾತೆ   

ಶ್ರೀನಗರ: ಜಮ್ಮು–ಕಾಶ್ಮೀರ ಕೇಡರ್‌ ಹಿರಿಯ ಐಪಿಎಸ್‌ ಅಧಿಕಾರಿ ಬಸಂತ್‌ ಕುಮಾರ್ ರಥ್ ಅವರು ರಾಜಕೀಯಕ್ಕೆ ಸೇರ್ಪಡೆಯಾಗುವ ಉದ್ದೇಶದಿಂದ ಭಾನುವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.

ಈ ಸಂಬಂಧ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ‘ಚುನಾವಣಾ ರಾಜಕೀಯಕ್ಕೆ ಸೇರಲು ಐಪಿಎಸ್‌ ಹುದ್ದೆಗೆ ರಾಜೀನಾಮೆ ನೀಡಲು ಬಯಸಿದ್ದೇನೆ’ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ,‘ನಾನು ರಾಜಕೀಯ ಪಕ್ಷಕ್ಕೆ ಸೇರುವುದಾದರೆ ಅದು ಬಿಜೆಪಿಗೆ ಮಾತ್ರ. ಚುನಾವಣೆಗೆ ಸ್ಪರ್ಧಿಸುವುದಾದರೆ ಅದು ಕಾಶ್ಮೀರದಿಂದ ಮಾತ್ರ. ರಾಜಕೀಯಕ್ಕೆ ಸೇರುವುದಾದರೆ ಮಾರ್ಚ್‌ 6, 2024ರ ಒಳಗಾಗಿ ಸೇರ್ಪಡೆಯಾಗುತ್ತೇನೆ’ ಎಂದು ಅವರು ಟ್ವೀಟ್‌ ಮಾಡಿದ್ದರು.

ಪೊಲೀಸ್‌ ಮಹಾ ನಿರ್ದೇಶಕ ಶ್ರೇಣಿಯನ್ನು ಹೊಂದಿದ್ದಬಸಂತ್‌ ಕುಮಾರ್‌ ಇತ್ತೀಚೆಗೆ ಹಲವು ವಿವಾದಗಳಿಂದ ಸುದ್ದಿಯಲ್ಲಿದ್ದರು.ದುರ್ನಡತೆ ಮತ್ತು ದುರ್ವರ್ತನೆ ಆರೋಪ ಸಂಬಂಧ ಎರಡು ವರ್ಷಗಳ ಹಿಂದೆ ಅವರನ್ನು ಅಮಾನತು ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.