ADVERTISEMENT

ಕದನ ವಿರಾಮ ಉಲ್ಲಂಘಿಸಿ ಪಾಕ್ ನಡೆಸಿದ್ದ ದಾಳಿ ವೇಳೆ ಗಾಯಗೊಂಡಿದ್ದ ಯೋಧ ಹುತಾತ್ಮ

ಏಜೆನ್ಸೀಸ್
Published 24 ಜನವರಿ 2021, 15:52 IST
Last Updated 24 ಜನವರಿ 2021, 15:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ:ಪಾಕಿಸ್ತಾನ ಸೇನೆ ಕಳೆದ ವಾರ ಕದನ ವಿರಾಮ ಉಲ್ಲಂಘಿಸಿ ನಡೆಸಿದ್ದ ದಾಳಿ ವೇಳೆ ಗಾಯಗೊಂಡಿದ್ದ ಯೋಧ ಇಂದು ಹುತಾತ್ಮರಾಗಿದ್ದಾರೆ.

ಈ ಸಂಬಂಧ ಭಾರತೀಯ ಸೇನೆ ಪ್ರಕಟಣೆ ಹೊರಡಿಸಿದ್ದು, ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಸುಂದರ್‌ಬಾನಿ ವಲಯದಲ್ಲಿ ಪಾಕ್ ಸೇನೆ ಜನವರಿ 18ರಂದು ಅಪ್ರಚೋದಿತ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿದೆ. ಇದಕ್ಕೆ ಭಾರತ ಸೇನಾಪಡೆ ತಕ್ಕ ಪ್ರತಿಕ್ರಿಯೆನೀಡಿದೆ ಎಂದು ತಿಳಿಸಿದೆ.

‘ಎನ್.‌ಕೆ. ನಿಶಾಂತ್‌ ಶರ್ಮಾ ಧೈರ್ಯಶಾಲಿ, ಅಪಾರ ಉತ್ಸಾಹಿ ಹಾಗೂ ಪ್ರಾಮಾಣಿಕ ಸೈನಿಕರಾಗಿದ್ದರು. ಅವರ ಸರ್ವೋಚ್ಛ ತ್ಯಾಗ ಮತ್ತು ಕರ್ತವ್ಯ ನಿಷ್ಠೆಗಾಗಿ ದೇಶವು ಸದಾ ಅವರಿಗೆ ಋಣಿಯಾಗಿರುತ್ತದೆ’ ಎಂದೂ ಗೌರವ ಸಮರ್ಪಿಸಿದೆ.

ADVERTISEMENT

ಪಾಕ್‌ ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಯೋಧ ಶರ್ಮಾ ಅವರಿಗೆ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.