ADVERTISEMENT

ಅಫ್ಜಲ್‌ಗುರು ಸ್ಮರಣೋತ್ಸವಕ್ಕೆ ಕಣಿವೆ ಬಂದ್: ಮೊಬೈಲ್‌ ಇಂಟರ್‌ನೆಟ್‌ ಸೇವೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 16:44 IST
Last Updated 9 ಫೆಬ್ರುವರಿ 2020, 16:44 IST
ಇಂಟರ್ನೆಟ್‌
ಇಂಟರ್ನೆಟ್‌   

ಶ್ರೀನಗರ: ಸಂಸತ್ತಿನ ಮೇಲಿನ ದಾಳಿಕೋರ ಮೊಹ್ಮದ್‌ ಅಫ್ಜಲ್‌ಗುರು ನೇಣಿಗೇರಿದ ಏಳನೇ ವರ್ಷದ ಸ್ಮರಣೋತ್ಸವ ಆಚರಣೆ ಅಂಗವಾಗಿ ಭಾನುವಾರ ಪ್ರತ್ಯೇಕತಾವಾದಿಗಳು ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಾದ್ಯಂತ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಭಾನುವಾರ ಮುಂಜಾನೆಯಿಂದ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

ಬಂದ್‌ ಹಿನ್ನೆಲೆಯಲ್ಲಿ ಶ್ರೀನಗರದಾದ್ಯಂತ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ವಾಹನಗಳ ಸಂಚಾರ ವಿರಳವಾಗಿತ್ತು.
ಭಾನುವಾರ (ಫೆ.9) ಹಾಗೂ ಮಂಗಳವಾರ (ಫೆ.11) ಬಂದ್‌ಗೆ ಕರೆ ನೀಡಿದ್ದ ಜಮ್ಮು ಕಾಶ್ಮೀರ ಲಿಬರೇಷನ್‌ ಫ್ರಂಟ್‌ನ ಪತ್ರಿಕಾ ಹೇಳಿಕೆಯನ್ನು ವರದಿ ಮಾಡಿದ ಇಬ್ಬರು ಪತ್ರಕರ್ತರನ್ನು ಪೊಲೀಸರು ಐದು ತಾಸು ವಿಚಾರಣೆ ನಡೆಸಿ ಕಳುಹಿಸಿದ್ದಾರೆ.

ADVERTISEMENT

ಬಂದ್‌ಗೆ ಕರೆ ನೀಡಿದ್ದ ನಿಷೇಧಿತ ಜಮ್ಮು ಕಾಶ್ಮೀರ ಲಿಬರೇಷನ್‌ ಫ್ರಂಟ್‌ನ (ಜೆಕೆಎಲ್‌ಎಫ್‌) ಸಂಘಟಕರ ವಿರುದ್ಧ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದರು.2001ರ ಡಿಸೆಂಬರ್‌ನಲ್ಲಿ ಸಂಸತ್‌ ಮೇಲೆ ದಾಳಿ ನಡೆಸಿದ ಅಫ್ಜಲ್‌ಗುರುವನ್ನು 2013ರಲ್ಲಿ ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.