ADVERTISEMENT

ಜಮ್ಮು ವಾಯುನೆಲೆ ಮೇಲಿನ ಡ್ರೋನ್‌ ದಾಳಿಯಲ್ಲಿ ಪಾಕ್‌ ಕೈವಾಡ ಸಾಧ್ಯತೆ: ಭದ್ರತಾ ಪಡೆ

ಬಾಂಬ್‌ನಲ್ಲಿ ‘ಪ್ರೆಶರ್‌ ಫ್ಯೂಸ್‌’ ಬಳಕೆ: ಭದ್ರತಾ ಪಡೆ

ಪಿಟಿಐ
Published 11 ಜುಲೈ 2021, 11:25 IST
Last Updated 11 ಜುಲೈ 2021, 11:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮ್ಮು/ನವದೆಹಲಿ: ಜಮ್ಮುವಿನಲ್ಲಿರುವ ವಾಯುನೆಲೆ ಮೇಲೆ ಇತ್ತೀಚೆಗೆ ಡ್ರೋನ್‌ ಮೂಲಕ ಹಾಕಿದ್ದ ಬಾಂಬ್‌ಗಳಲ್ಲಿ ‘ಪ್ರೆಶರ್‌ ಫ್ಯೂಸ್‌’ಗಳನ್ನು ಬಳಸಲಾಗಿದೆ. ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಮಿಲಿಟರಿ ಅಥವಾ ಲಷ್ಕರ್‌–ಎ–ತಯಬಾ ಸಂಘಟನೆಯ ಕೈವಾಡ ಇರುವುದನ್ನು ಇದು ತೋರಿಸುತ್ತದೆ ಎಂದು ಭದ್ರತಾ ಪಡೆ ಮೂಲಗಳು ಹೇಳಿವೆ.

‘ಈ ರೀತಿಯ ಭಯೋತ್ಪಾದಕ ದಾಳಿ ನಡೆದಿರುವುದು ಇದೇ ಮೊದಲು. ಸುಧಾರಿತ ಸ್ಫೋಟಕ ಸಾಧನ (ಐಇಡಿ) ತಯಾರಿಸಲು ಎಲ್‌ಇಟಿಗೆ ಐಎಸ್‌ಐ ನೆರವು ನೀಡಿರುವ ಸಾಧ್ಯತೆಗಳೇ ಹೆಚ್ಚು’ ಎಂದು ಇವೇ ಮೂಲಗಳು ಹೇಳಿವೆ.

‘ವಾಯುನೆಲೆಯ ಚಾವಣಿಯನ್ನು ಕೊರೆದಿದ್ದ ಐಇಡಿಯಲ್ಲಿ ಆರ್‌ಡಿಎಕ್ಸ್‌ ಹಾಗೂ ಇತರ ರಾಸಾಯನಿಕಗಳ ಮಿಶ್ರಣ ಇತ್ತು. ಈ ಸ್ಫೋಟಕಗಳ ಒಟ್ಟು ತೂಕ ಒಂದು ಕೆ.ಜಿ ಗಿಂತಲೂ ಕಡಿಮೆ ಇತ್ತು. ನೆಲದ ಮೇಲೆ ಬಿದ್ದಿದ್ದ ಐಇಡಿಯಲ್ಲಿ ಒಂದು ಕೆ.ಜಿಗಿಂತ ತುಸು ಹೆಚ್ಚು ತೂಕದ ಸ್ಫೋಟಕಗಳಿದ್ದವು’ ಎಂದು ಮೂಲಗಳು ಹೇಳಿವೆ.

ADVERTISEMENT

ಟ್ಯಾಂಕ್ ಪ್ರತಿರೋಧಕ ಶಸ್ತ್ರಾಸ್ತ್ರಗಳಲ್ಲಿ, ಗಣಿಗಾರಿಕೆಯಲ್ಲಿ ಈ ‘ಪ್ರೆಶರ್‌ ಫ್ಯೂಸ್‘ಗಳನ್ನು ಬಳಸಲಾಗುತ್ತದೆ. ಈ ‘ಫ್ಯೂಸ್‌’ಗಳನ್ನು ಅಳವಡಿಸಿದ ಸ್ಫೋಟಕ ಸಾಧನ ರಭಸದಿಂದ ಕೆಳಕ್ಕೆ ಬಿದ್ದಾಗ, ಇಲ್ಲವೇ ಅವುಗಳ ಮೇಲೆ ವ್ಯಕ್ತಿ, ವಾಹನ ಹಾಯ್ದು ಹೋದಾಗ ಸ್ಫೋಟ ಸಂಭವಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.