ಭುವನೇಶ್ವರ : ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯ ಸರ್ನಾ ಸೈನಿಕ ಶಿಬಿರದಲ್ಲಿ ಸೇವಾ ರೈಫಲ್‌ನಿಂದ ಆಕಸ್ಮಿಕವಾಗಿ ಹಾರಿದ ಗುಂಡಿನಿಂದ ಸೈನಿಕರೊಬ್ಬರು ಮೃತಪಟ್ಟಿದ್ದಾರೆ.
ಭದೆರ್ವಾದ ಸರ್ನಾ ಸೈನಿಕ ಶಿಬಿರದಲ್ಲಿ ಗುಂಡು ಹಾರಿದ ಶಬ್ದವನ್ನು ಸಹೋದ್ಯೋಗಿಳೊಂದಿಗೆ ಕೇಳಿಸಿಕೊಂಡೆವು ಎಂದು ಸೈನಿಕರು ಹೇಳಿದ್ದಾರೆ.
ಗುಂಡು ತಗುಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೈನಿಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಬಿಸ್ವಾಲ್ ಹೇಳಿದ್ದಾರೆ.
ಮೃತಪಟ್ಟ ಸೈನಿಕ ಒಡಿಶಾದ ನಿವಾಸಿಯಾಗಿದ್ದಾನೆ. ಸೇವಾ ಬಂದೂಕಿನಲ್ಲಿದ್ದ ಕಾಡತೂಸುಗಳನ್ನು ತೆಗೆಯುವ ಸಂದರ್ಭದಲ್ಲಿ ಗುಂಡು ಹಾರಿದೆ ಎಂದು ಭದೇರ್ವಾದ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಶರ್ಮಾ ಪ್ರಾಥಮಿಕ ತನಿಖೆಯಲ್ಲಿ ಅಧೀಕೃತವಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.