ADVERTISEMENT

ಜಮ್ಮು: ಪೊಲೀಸ್‌ ಕಾನ್‌ಸ್ಟೆಬಲ್ ಹತ್ಯೆ

ಪಿಟಿಐ
Published 6 ಜುಲೈ 2018, 19:43 IST
Last Updated 6 ಜುಲೈ 2018, 19:43 IST
ಮೃತ ಜಾವೇದ್‌ ಅಹ್ಮದ್ ದರ್ ಅವರ ಅಂತ್ಯಸಂಸ್ಕಾರದ ವೇಳೆ ದುಃಖತಪ್ತರಾದ ಕುಟುಂಬ ಸದಸ್ಯರು ಪರಸ್ಪರ ಸಾಂತ್ವನಪಡಿಸಿಕೊಂಡರು –ಪಿಟಿಐ ಚಿತ್ರ
ಮೃತ ಜಾವೇದ್‌ ಅಹ್ಮದ್ ದರ್ ಅವರ ಅಂತ್ಯಸಂಸ್ಕಾರದ ವೇಳೆ ದುಃಖತಪ್ತರಾದ ಕುಟುಂಬ ಸದಸ್ಯರು ಪರಸ್ಪರ ಸಾಂತ್ವನಪಡಿಸಿಕೊಂಡರು –ಪಿಟಿಐ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರಿಂದ ಅಪಹರಣವಾಗಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ ಜಾವೇದ್ ಅಹ್ಮದ್ ದರ್ ಅವರ ಮೃತದೇಹ ಶುಕ್ರವಾರ ಪತ್ತೆಯಾಗಿದೆ.

ಶೋಪಿಯಾನ್‌ನ ವೆಹಿಲ್‌ನಲ್ಲಿರುವ ನಿವಾಸದಿಂದಶನಿವಾರ ರಾತ್ರಿಅವರನ್ನು ಅಪಹರಿಸಲಾಗಿತ್ತು.

‘ಪಕ್ಕದ ಕುಲ್ಗಾಂವ್ ಜಿಲ್ಲೆಯ ಸೆಹ್ಪೋರದ ರಸ್ತೆಬದಿಯಲ್ಲಿ ಮೃತದೇಹ ಪತ್ತೆಯಾಗಿದೆ.ತಲೆಗೆ ಗುಂಡಿಟ್ಟು ಅವರ ಹತ್ಯೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆಸಿಯಾ ಅಂದ್ರಾಬಿ ಎನ್‌ಐಎ ವಶಕ್ಕೆ

ನವದೆಹಲಿ: ನಿಷೇಧಿತ ದುಖ್ತರಾನ್ ಏ ಮಿಲ್ಲತ್ ಮುಖ್ಯಸ್ಥೆ ಆಸಿಯಾ ಅಂದ್ರಾಬಿ ಹಾಗೂ ಇನ್ನಿಬ್ಬರು ಪ್ರತ್ಯೇಕತಾವಾದಿಗಳನ್ನು ದೆಹಲಿ ನ್ಯಾಯಾಲಯ ಗುರುವಾರ10 ದಿನಗಳ ಅವಧಿಗೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಶಕ್ಕೆ ನೀಡಿದೆ.

ದೇಶದ ವಿರುದ್ಧ ಯುದ್ಧ ಸಾರಿದ್ದಕ್ಕಾಗಿ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿದ್ವೇಷ ಭಾಷಣ ಮಾಡಿದ್ದಕ್ಕಾಗಿ ಇವರ ವಿರುದ್ಧ ಏಪ್ರಿಲ್‌ನಲ್ಲಿ ಎನ್‌ಐಎ ಪ್ರಕರಣ ದಾಖಲಿಸಿತ್ತು.

ಕಳೆದ ತಿಂಗಳು ಜಾಮೀನು ಅರ್ಜಿ ರದ್ದಾದ ನಂತರ ಅಂದ್ರಾಬಿ ಹಾಗೂ ಅವರ ಜತೆಗಾರರಾದ ಸೋಫಿ ಫಹಮೀದಾ ಹಾಗೂ ನಾಹಿದಾ ನಸ್ರೀನ್ ಶ್ರೀನಗರ ಜೈಲಿನಲ್ಲಿದ್ದಾರೆ.

ದಾಳಿಯಿಂದ ಮೂವರ ರಕ್ಷಣೆ

ಹಫ್ಲಾಂಗ್ : ಮಕ್ಕಳ ಕಳ್ಳರು ಎನ್ನುವ ಶಂಕೆಯಿಂದಾಗಿ ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಮಹುರ್ ರೈಲು ನಿಲ್ದಾಣದಲ್ಲಿಹಲ್ಲೆಗೊಳಗಾಗುತ್ತಿದ್ದ ಮೂವರು ಸಾಧುಗಳನ್ನು ರಕ್ಷಿಸಲಾಗಿದೆ.

ವದಂತಿಯಿಂದಾಗಿ ನೂರಾರು ಜನರ ಗುಂಪೊಂದು ಗುರುವಾರ ರೈಲು ನಿಲ್ದಾಣದಲ್ಲಿ ಈ ಸಾಧುಗಳ ಮೇಲೆ ಹಲ್ಲೆ ನಡೆಸಲು ಮುಂದಾಗಿತ್ತು. ನಿಲ್ದಾಣದ ಸಮೀಪವೇ ಇದ್ದ ಸೇನಾನೆಲೆಯ ಸಿಬ್ಬಂದಿ, ಪೊಲೀಸರು ರಕ್ಷಿಸಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.