ADVERTISEMENT

ಅಯೋಧ್ಯೆ ರಾಮ ಮಂದಿರ ನಿರ್ಮಾಣ: ನಟ ಪವನ್‌ ಕಲ್ಯಾಣ್‌ರಿಂದ ₹ 30 ಲಕ್ಷ ದೇಣಿಗೆ

ಏಜೆನ್ಸೀಸ್
Published 22 ಜನವರಿ 2021, 16:24 IST
Last Updated 22 ಜನವರಿ 2021, 16:24 IST
ನಟ ಪವಣ್‌ ಕಲ್ಯಾಣ್‌
ನಟ ಪವಣ್‌ ಕಲ್ಯಾಣ್‌   

ತಿರುಪತಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ಜನಸೇನಾ ಪಕ್ಷದ ಮುಖ್ಯಸ್ಥ ಹಾಗೂ ತೆಲುಗಿನ ಖ್ಯಾತ ನಟ ಪವನ್‌ ಕಲ್ಯಾಣ್‌ ಅವರು ₹ 30 ಲಕ್ಷ ದೇಣಿಗೆ ನೀಡಿದ್ದಾರೆ.

ತಿರುಪತಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಪವನ್‌ ಕಲ್ಯಾಣ್‌ ಅವರು ಶುಕ್ರವಾರ ಭೇಟಿ ನೀಡಿದ್ದಾರೆ. ಆ ವೇಳೆಯಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ₹30 ಲಕ್ಷ ದೇಣಿಗೆ ನೀಡುವುದಾಗಿ ಪವನ್‌ ಕಲ್ಯಾಣ್‌ ಘೋಷಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾಮಗಾರಿಯು ಸದ್ಯ ಆರಂಭವಾಗಿದ್ದು, 36–40 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

ADVERTISEMENT

ದೇವಾಲಯದ ನಿರ್ಮಾಣದ ಉಸ್ತುವಾರಿಯನ್ನು ‘ಎಲ್‌ ಅ್ಯಂಡ್‌ ಟಿ’ ನೋಡಿಕೊಳ್ಳುತ್ತಿದೆ. ಚೆನ್ನೈ ಐಐಟಿಯು ಮಣ್ಣಿನ ಬಲವನ್ನು ಪರೀಕ್ಷಿಸುತ್ತಿದೆ. ಕಟ್ಟಡವು ಭೂಕಂಪ ನಿರೋಧಕವಾಗಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಿಬಿಆರ್‌ಐ ಸೇವೆ ಪಡೆದುಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.