ADVERTISEMENT

ಜಸ್ವಂತ್‌ ಪುತ್ರ ಬಿಜೆಪಿ ಬಿಡುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2018, 20:50 IST
Last Updated 4 ಸೆಪ್ಟೆಂಬರ್ 2018, 20:50 IST
   

ಜೈಪುರ: ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಕೇಂದ್ರದಲ್ಲಿ ಸಚಿವರಾಗಿದ್ದ ಜಸ್ವಂತ್‌ ಸಿಂಗ್‌ ಅವರ ಮಗ ಮಾನವೇಂದ್ರ ಸಿಂಗ್‌ ಅವರು ರಾಜಸ್ಥಾನದ ಬಾರ್ಮೇರ್‌ನಲ್ಲಿ ಭಾನುವಾರ ‘ಸ್ವಾಭಿಮಾನ ರ್‍ಯಾಲಿ’ ನಡೆಸಿದ್ದಾರೆ. ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಮೊದಲೇ ಅವರು ಬಿಜೆಪಿ ತೊರೆಯುತ್ತಾರೆ ಎಂಬ ವದಂತಿಗಳಿಗೆ ಇದು ಪುಷ್ಟಿ ನೀಡಿದೆ.

ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ‘ರಾಜಸ್ಥಾನ ಗೌರವ ಯಾತ್ರೆ’ ಬಾರ್ಮೇರ್‌ಗೆ ಬಂದಾಗ ಮಾನವೇಂದ್ರ ಅವರು ದೂರವೇ ಉಳಿದಿದ್ದರು.

ಮಾನವೇಂದ್ರ ಅವರು ಶಿವ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜಸ್ವಂತ್‌ ಸಿಂಗ್‌ ಅವರಿಗೆ ಬಿಜೆಪಿ ಟಿಕಟ್‌ ನಿರಾಕರಿಸಿದ ನಂತರ ಮಾನವೇಂದ್ರ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ.

ADVERTISEMENT

ಹಾಗಿದ್ದರೂ ಬಿಜೆಪಿ ತೊರೆಯುವ ಬಗ್ಗೆ ಅಥವಾ ಕಾಂಗ್ರೆಸ್‌ ಪಕ್ಷವನ್ನು ಸೇರುವ ಬಗ್ಗೆ ಮಾನವೇಂದ್ರ ಏನನ್ನೂ ಸ್ಪಷ್ಟವಾಗಿ ತಿಳಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.