ADVERTISEMENT

2019ರ ಜೆಇಇ ಅಡ್ವಾನ್ಸ್‌ ಪರೀಕ್ಷೆ ಫಲಿತಾಂಶ ಪ್ರಕಟ: ಕಾರ್ತಿಕೇಯ ಟಾಪರ್

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 7:00 IST
Last Updated 14 ಜೂನ್ 2019, 7:00 IST
ಕಾರ್ತಿಕೇಯ
ಕಾರ್ತಿಕೇಯ    

ನವದೆಹಲಿ:ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ (ಐಐಟಿ) ಪ್ರವೇಶಾತಿ ನಿರ್ಧರಿಸಲು ನಡೆದ ಜಂಟಿ ಉನ್ನತ ಪ್ರವೇಶ ಪರೀಕ್ಷೆಯ (ಜೆಇಇ–ಅಡ್ವಾನ್ಸ್‌) ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ.

ಮಹಾರಾಷ್ಟ್ರದ ಕಾರ್ತಿಕೇಯ ಗುಪ್ತ 2019ರ ಸಾಲಿನಜೆಇಇ–ಅಡ್ವಾನ್ಸ್‌ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್‌ ಪಡೆದಿದ್ದಾರೆ.

ಐಐಟಿ ರೂರ್ಕಿ ಜೆಇಇ ಅಡ್ವಾನ್ಸ್‌ ಪ್ರವೇಶ ಪರೀಕ್ಷೆಯನ್ನು ನಡೆಸಿತ್ತು. ದೇಶದ ವಿದ್ಯಾರ್ಥಿಗಳು ಸೇರಿದಂತೆ ವಿದೇಶಿಯ ವಿದ್ಯಾರ್ಥಿಗಳುಜೆಇಇ ಪರೀಕ್ಷೆ ಬರೆದಿದ್ದರು.

ADVERTISEMENT

ಜೆಇಇ ಅಡ್ವಾನ್ಸ್‌ಡ್‌ 2019ರ ಪರೀಕ್ಷೆಯ ಫಲಿತಾಂಶವನ್ನು ಐಐಟಿ ರೂರ್ಕಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಈ ಕೆಳಗಿನ ಲಿಂಕ್‌ ಬಳಿಸಿ ಫಲಿತಾಂಶವನ್ನು ನೋಡಬಹುದು

ಫಲಿತಾಂಶದ ವೆಬ್‌ಸೈಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.