ADVERTISEMENT

ಜೆಇಇ ಮುಖ್ಯ ಪರೀಕ್ಷೆ ವೇಳಾಪಟ್ಟಿ ಪರಿಷ್ಕರಣೆ

ಪಿಟಿಐ
Published 14 ಮಾರ್ಚ್ 2022, 21:30 IST
Last Updated 14 ಮಾರ್ಚ್ 2022, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಐಐಟಿಗಳ ಪ್ರವೇಶಾತಿಗೆ ಅವಕಾಶ ಕಲ್ಪಿಸುವ 2022ನೇ ಸಾಲಿನ ಜೆಇಇ- ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಪರಿಷ್ಕರಣೆ ಮಾಡಿದೆ.

ಏಪ್ರಿಲ್‌ 16ರಿಂದ 21ರವರೆಗೆ ನಿಗದಿಯಾಗಿದ್ದ ಜೆಇಇ ಮುಖ್ಯ ಪರೀಕ್ಷೆ, ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಏಪ್ರಿಲ್‌ 21ರಿಂದ 29ರವರೆಗೆ ಮತ್ತು ಮೇ 1ರಿಂದ ಮೇ 4ರವರೆಗೆ ನಡೆಯಲಿದೆ.

ಈ ಮುನ್ನ ಜೆಇಇ-ಮುಖ್ಯ ಪರೀಕ್ಷೆಗಳು 12ನೇ ತರಗತಿ ಪರೀಕ್ಷೆ ನಡೆಯುವ ದಿನದಂದೇ ನಿಗದಿಯಾಗಿದ್ದವು. ಇದರಿಂದ ತಾವು 12ನೇ ತರಗತಿ ಅಥವಾ ಜೆಇಇ ಪರೀಕ್ಷೆಗಳ ಪೈಕಿ ಒಂದನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ ಎಂದು ಅವಲತ್ತುಕೊಂಡಿದ್ದ ಅಭ್ಯರ್ಥಿಗಳು, ಪರೀಕ್ಷಾ ದಿನಾಂಕದ ಬದಲಾವಣೆಗೆ ಕೋರಿದ್ದರು. ಅದರಂತೆ ಈಗ ಪರೀಕ್ಷಾ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.