ADVERTISEMENT

ಜೆಇಇ: ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 16:25 IST
Last Updated 19 ಜನವರಿ 2019, 16:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಜನವರಿ ಮುಖ್ಯಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಗೊಂಡಿದೆ. ನಿಗದಿಗಿಂತ 12 ದಿನ ಮೊದಲೇ ಫಲಿತಾಂಶ ಪ್ರಕಟಿಸಲಾಗಿದೆ.

jeemain.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಘಟಕ (ಎನ್‌ಟಿಎ) ಹೇಳಿದೆ.

ಜೆಇಇ ಎರಡನೇ ಪತ್ರಿಕೆಯ ಮುಖ್ಯಪರೀಕ್ಷೆ ಏಪ್ರಿಲ್‌ನಲ್ಲಿ ನಡೆಯಲಿದ್ದು, ಫೆಬ್ರುವರಿ 8ರಿಂದ ಮಾರ್ಚ್‌ 7ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕಂಪ್ಯೂಟರ್‌ ಆಧಾರಿತ ಮಾದರಿಯಲ್ಲಿ ಪರೀಕ್ಷೆ ಇದಾಗಿದ್ದು, ಏಪ್ರಿಲ್‌ 6ರಿಂದ 20ರವರೆಗೆ ನಡೆಯಲಿದೆ ಎಂದುಎನ್‌ಟಿಎ ಹೇಳಿದೆ.

ADVERTISEMENT

ಮೊದಲನೆ ಪತ್ರಿಕೆಯ ಪರೀಕ್ಷೆ ಜನವರಿ 8ರಿಂದ 12ರವರೆಗೆ ನಡೆದಿತ್ತು. ದೇಶದ 467 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 9,29, 198 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

‘15 ಅಭ್ಯರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ’ ಎಂದು ಎನ್‌ಟಿಎ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.