ADVERTISEMENT

ಜಾರ್ಖಂಡ್: 18 ಬಿಜೆಪಿ ಶಾಸಕರ ಅಮಾನತು

ಪಿಟಿಐ
Published 1 ಆಗಸ್ಟ್ 2024, 16:03 IST
Last Updated 1 ಆಗಸ್ಟ್ 2024, 16:03 IST
<div class="paragraphs"><p>ಬಿಜೆಪಿ </p></div>

ಬಿಜೆಪಿ

   

ಬಿಜೆಪಿ (ಸಾಂದರ್ಭಿಕ ಚಿತ್ರ)

ರಾಂಚಿ: ಜಾರ್ಖಂಡ್ ವಿಧಾನಸಭೆಯಿಂದ 18 ಬಿಜೆಪಿ ಶಾಸಕರನ್ನು ಒಂದು ದಿನದ ಮಟ್ಟಿಗೆ ಸ್ಪೀಕರ್‌ ಅಮಾನತು ಮಾಡಿದ್ದಾರೆ.

ADVERTISEMENT

ಸದನದಲ್ಲಿ ಬುಧವಾರದಿಂದ ಬಿಜೆಪಿ ಶಾಸಕರು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಬುಧವಾರ ರಾತ್ರಿ ಕೂಡ ಕೆಲ ಶಾಸಕರು ವಿಧಾನಸಭೆಯಲ್ಲಿ ತಂಗಿದ್ದರು.

ಗುರುವಾರ ಸದನ ಆರಂಭವಾಗುತ್ತಿದಂತೆ ಬಿಜೆಪಿ ಶಾಸಕರು ಮತ್ತೆ ಪ್ರತಿಭಟನೆ ಮುಂದುವರೆಸಿದರು. ಈ ವೇಳೆ ಸ್ಪೀಕರ್‌ ಅವರು ಬಿಜೆಪಿ 18 ಶಾಸಕರನ್ನು ಅಮಾನತು ಮಾಡಿದರು. 

ಈ ಘಟನೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಜಾರ್ಖಂಡ್‌ನಲ್ಲಿ ಸರ್ವಾಧಿಕಾರಿ ಆಡಳಿವಿದ್ದು ಜೆಎಂಎಂ ಪಕ್ಷ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ವಿರೋಧ ಪಕ್ಷದ ನಾಯಕ ಅಮರ್ ಕುಮಾರ್ ಬೌರಿ ಆರೋಪ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.