ADVERTISEMENT

ಜಾರ್ಖಂಡ್‌: ಶೇ 62 ಮತದಾನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 17:23 IST
Last Updated 30 ನವೆಂಬರ್ 2019, 17:23 IST
ಲೋಹರ್ದಾಗ್‌ನಲ್ಲಿ ಮಗುವಿನೊಂದಿಗೆ ಮತದಾನ ಮಾಡಿ ಬಂದ ಮಹಿಳೆ
ಲೋಹರ್ದಾಗ್‌ನಲ್ಲಿ ಮಗುವಿನೊಂದಿಗೆ ಮತದಾನ ಮಾಡಿ ಬಂದ ಮಹಿಳೆ   

ರಾಂಚಿ: ಜಾರ್ಖಂಡ್‌ ವಿಧಾನಸಭೆ ಚುನಾವಣೆಯ ಮೊದಲ ಹಂತದಲ್ಲಿ ಶೇಕಡ 62.8ರಷ್ಟು ಮತದಾನವಾಗಿದೆ.

ಶನಿವಾರ 13 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಈ ಎಲ್ಲ ಕ್ಷೇತ್ರಗಳು ನಕ್ಸಲ್‌ ಚಟುವಟಿಕೆಯ ಪ್ರದೇಶಗಳಾಗಿವೆ.
ಹೀಗಾಗಿ, ಮತದಾನಕ್ಕೆ ಮಧ್ಯಾಹ್ನ 3ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಮತದಾನವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದ ನಿಷೇಧಿತ ಸಿಪಿಎಂ ಸಂಘಟನೆಯು, ಗುಮ್ಲಾದಲ್ಲಿ ಸೇತುವೆ ಸ್ಫೋಟಗೊಳಿಸಿದೆ.
ದಲ್ಟೊಂಗಂಜ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಜತೆ ನಡೆದ ಘರ್ಷಣೆ ಸಂದರ್ಭದಲ್ಲಿ ರಿವಾಲ್ವರ್‌ ತೋರಿಸಿದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎನ್‌. ತ್ರಿಪಾಠಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

ನಕ್ಸಲ್‌ ಚಟುವಟಿಕೆಗಳು ತೀವ್ರವಾಗಿರುವ ಪ್ರದೇಶಗಳಲ್ಲಿ ಮತದಾರರ ಪ್ರತಿಕ್ರಿಯೆ ಉತ್ತಮವಾಗಿತ್ತು. ನಕ್ಸಲರ ಬೆದರಿಕೆಯಿಂದ ಈ ಮೊದಲು ಇಲ್ಲಿ ಮತದಾನದಿಂದ ದೂರ ಉಳಿಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.