ADVERTISEMENT

ಮೇವು ಹಗರಣ: ಡಿ.11ಕ್ಕೆ ಲಾಲು ಪ್ರಸಾದ್‌ ಯಾದವ್ ಜಾಮೀನು ಅರ್ಜಿ ವಿಚಾರಣೆ

ಏಜೆನ್ಸೀಸ್
Published 27 ನವೆಂಬರ್ 2020, 8:35 IST
Last Updated 27 ನವೆಂಬರ್ 2020, 8:35 IST
ಲಾಲು ಪ್ರಸಾದ್‌ ಯಾದವ್‌
ಲಾಲು ಪ್ರಸಾದ್‌ ಯಾದವ್‌    

ರಾಂಚಿ: ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ದೋಷಿಯಾಗಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಜಾರ್ಖಂಡ್‌ ಹೈಕೋರ್ಟ್‌ ಡಿಸೆಂಬರ್‌ 11ಕ್ಕೆ ಮುಂದೂಡಿದೆ.

1992–93ರಲ್ಲಿ ಚಾಯಿಬಾಸಾ ಖಜಾನೆಯಿಂದ ₹33.67 ಕೋಟಿ ಹಣವನ್ನು ಅಕ್ರಮವಾಗಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಅಧ್ಯಕ್ಷ ಲಾಲು ಸೇರಿದಂತೆ ಒಟ್ಟು 16 ಮಂದಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆ ಅವಧಿಯಲ್ಲಿ ಲಾಲು ಅವರೇ ಬಿಹಾರದ ಮುಖ್ಯಮುಂತ್ರಿ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT