ADVERTISEMENT

ಧೋಡಾ: ಬಿರುಕು ಬಿಟ್ಟ ಮನೆಗಳ ಬಗ್ಗೆ ಪರಿಶೀಲನೆ– ಲೆಫ್ಟಿನೆಂಟ್ ಗರ್ವನರ್

ಪಿಟಿಐ
Published 4 ಫೆಬ್ರುವರಿ 2023, 13:56 IST
Last Updated 4 ಫೆಬ್ರುವರಿ 2023, 13:56 IST
ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ
ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ   

ಜಮ್ಮು: ‘ಜಮ್ಮು ಮತ್ತು ಕಾಶ್ಮೀರದ ಧೋಡಾ ಜಿಲ್ಲೆಯಲ್ಲಿ ಬಿರುಕುಬಿಟ್ಟ 24ಕ್ಕೂ ಹೆಚ್ಚಿನ ಮನೆಗಳ ಮೇಲೆ ಅಲ್ಲಿನ ಆಡಳಿತವು ನಿಗಾವಹಿಸಿದ್ದು, ಪರಿಶೀಲನೆ ನಡೆಸುತ್ತಿದೆ. ಜೋಶಿಮಠದ ರೀತಿಯ ಭೂಕುಸಿತದ ಮಾದರಿ ಇಲ್ಲಿಲ್ಲ’ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶನಿವಾರ ಹೇಳಿದ್ದಾರೆ.

ಇಲ್ಲಿನ ರಾಜಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಾನಿಗೀಡಾದ ಮನೆಗಳಲ್ಲಿದ್ದ ಜನರನ್ನು ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ. ಮುಂದಿನ ಸಂದರ್ಭಗಳ ಬಗ್ಗೆ ಜಿಲ್ಲಾಡಳಿತವು ನಿಗಾ ವಹಿಸಿದೆ. ಪುನರ್ವಸತಿಗೆ ಸಂಬಂಧಿಸಿದಂತೆ ಅತ್ಯುತ್ತಮ ಕ್ರಮ ವಹಿಸಲಾಗುತ್ತಿದೆ’ ಎಂದಿದ್ದಾರೆ.

ಜೋಶಿಮಠದ ಪರಿಸ್ಥಿತಿ ಇಲ್ಲಿಯೂ ಆಗುವುದೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ, ‘ಅಲ್ಲಿನ ರೀತಿಯ ಪರಿಸ್ಥಿತಿ ಖಂಡಿತಾ ಇಲ್ಲಿ ಆಗದು’ ಎಂದು ಮನೋಜ್ ಸಿನ್ಹಾ ಉತ್ತರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.