ADVERTISEMENT

ಜೆಕೆಎಲ್‌ಎಫ್‌ ಸಂಸ್ಥಾಪಕನ ಸಹೋದರ ಸೇರಿ 35 ಕೈದಿಗಳಿಗೆ ಕುರಕುಶಲ ತರಬೇತಿ

ಪಿಟಿಐ
Published 30 ಜುಲೈ 2023, 15:42 IST
Last Updated 30 ಜುಲೈ 2023, 15:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಭದ್ರವಾಹ (ಜಮ್ಮು–ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರ ಲಿಬರೇಷನ್‌ ಫ್ರಂಟ್ (ಜೆಕೆಎಲ್‌ಎಫ್) ಸಹ ಸಂಸ್ಥಾಪಕ ಮಕ್ಬೂಲ್‌ ಭಟ್‌ ಸಹೋದರ ಜಹೂರ್‌ ಅಹ್ಮದ್ ಭಟ್‌ ಸೇರಿ 35 ಕೈದಿಗಳಿಗೆ ಇಲ್ಲಿನ ಭದ್ರವಾಹ ಜಿಲ್ಲೆಯ ಕಾರಾಗೃಹದಲ್ಲಿ ಕರಕುಶಲ ವಸ್ತುಗಳ ತಯಾರಿಕೆಗೆ ತರಬೇತಿ ನೀಡಲಾಗುತ್ತಿದೆ.

ಮಕ್ಬೂಲ್‌ ಭಟ್‌ನನ್ನು ದೆಹಲಿಯ ತಿಹಾರ್‌ ಜೈಲಿನಲ್ಲಿ 1984ರಲ್ಲಿ ಗಲ್ಲಿಗೇರಿಸಲಾಗಿದೆ. ಜಹೂರ್‌ನನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಭದ್ರವಾಹ ಜಿಲ್ಲಾ ಕಾರಾಗೃಹದಲ್ಲಿರಿಸಲಾಗಿದೆ. ಈತನನ್ನು 2015ರಲ್ಲಿ ಬಂಧಿಸಲಾಗಿದೆ.

‘ಪೇಪರ್‌ ಬ್ಯಾಗ್‌, ಹೂವಿನ ಕುಂಡ ಮತ್ತಿತರ ಕರಕುಶಲ ವಸ್ತುಗಳ ತಯಾರಿಕೆಗೆ ಕೈದಿಗಳಿಗೆ ತರಬೇತಿ ನೀಡಲಾಗುತ್ತಿದೆ. ಪರಿಸರಕ್ಕೆ ಹಾನಿಯುಂಟುಮಾಡುವ ಪ್ಲಾಸ್ಟಿಕ್‌ ಬ್ಯಾಗ್‌ ಬಳಕೆ ತಡೆಗಟ್ಟುವುದು ಇದರ ಮುಖ್ಯ ಉದ್ದೇಶ. ಜೊತೆಗೆ ಕೈದಿಗಳು ಒತ್ತಡದಿಂದ ಹೊರಬರಲು ಮತ್ತು ಆತ್ಮನಿರ್ಭರರಾಗಲು ನೆರವಾಗುತ್ತದೆ’ ಎಂದು ಕಾರಾಗೃಹದ ಪೊಲೀಸ್ ವರಿಷ್ಠಾಧಿಕಾರಿ ಮುಸ್ತಾಕ್‌ ಮಲ್ಲಾ ತಿಳಿಸಿದ್ದಾರೆ.

ADVERTISEMENT

‘ಕೆಟ್ಟ ಯೋಚನೆಗಳು ಮತ್ತು ಒತ್ತಡದಿಂದ ಹೊರಬರಲು ನೆರವಾದ ಜೈಲಿನ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಜೊತೆಗೆ ಜೈಲಿನಿಂದ ಬಿಡುಗಡೆಯಾದ ನಂತರ ಕುಟುಂಬದ ಮೇಲೆ ಅವಲಂಬಿತರಾಗದೆ ಜೀವನ ನಡೆಸಲು ಈ ತರಬೇತಿ ಸಹಾಯಕವಾಗಲಿದೆ’ ಎಂದು ಜಹೂರ್‌ ಅಹ್ಮದ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.