ADVERTISEMENT

ಭೂಕುಸಿತದ ಭೀತಿಯಿಂದ ಸ್ಥಗಿತಗೊಂಡಿದ್ದ ಬೈಪಾಸ್‌ ರಸ್ತೆಗೆ ಮರುಚಾಲನೆ: ಜೋಶಿಮಠ ಬಂದ್‌

ಪಿಟಿಐ
Published 23 ಜೂನ್ 2023, 10:46 IST
Last Updated 23 ಜೂನ್ 2023, 10:46 IST
   

ಡೆಹ್ರಾಡೂನ್: ಜನವರಿಯಲ್ಲಿ ಸಂಭವಿಸಿದ್ದ ಭೂಕುಸಿತದಿಂದ ನಲುಗಿರುವ ಜೋಶಿಮಠದಲ್ಲಿ ಹೆಲಾಂಗ್‌– ಮಾರ್ವಾರಿ ಬೈಪಾಸ್‌ ರಸ್ತೆ ನಿರ್ಮಾಣ ವಿರೋಧಿಸಿ ಶುಕ್ರವಾರ ಬಂದ್‌ ಆಚರಿಸಲಾಯಿತು.

ಜೋಶಿಮಠ ಉದ್ಯೋಗ ವ್ಯಾಪಾರ ಪ್ರತಿನಿಧಿ ಮಂಡಲ ಈ ಬಂದ್‌ಗೆ ಕರೆ ನೀಡಿತ್ತು. ಇದೇ ವೇಳೆ ‍ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆಯೂ ನಡೆಯಿತು.

ಜನವರಿ 5ರಂದು ಜೋಶಿಮಠದಲ್ಲಿ ಭೂಕುಸಿತ ಸಂಭವಿಸಿದ ಬಳಿಕ ಈ ರಸ್ತೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಜೂನ್‌ 5ರಿಂದ ಕಾಮಗಾರಿಯನ್ನು ಪುನರಾರಂಭ ಮಾಡಲಾಗಿದೆ.

ADVERTISEMENT

ಬದ್ರಿನಾಥ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಬದಲಿ ಮಾರ್ಗವಾಗಿರುವ ಈ ರಸ್ತೆಯು ಚೀನಾದ ಗಡಿ ಭಾಗದವರೆಗೂ ಸಂಪರ್ಕ ಸಾಧಿಸುತ್ತದೆ.  ಈ ರಸ್ತೆ ನಿರ್ಮಾಣದಿಂದ ಜೋಶಿಮಠದ ಪಟ್ಟಣದಲ್ಲಿ ಭೂ ಕುಸಿತದ ಸಮಸ್ಯೆಗಳು ಎದುರಾಗಬಹುದು ಎಂಬ ಕಾರಣಕ್ಕೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು.

ಬೈಪಾಸ್ ರಸ್ತೆ ನಿರ್ಮಾಣವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು, ‘ಬೈಪಾಸ್‌ ರಸ್ತೆ ನಿರ್ಮಾಣವು ನಮ್ಮ ವ್ಯಾಪಾರ ವಹಿವಾಟನ್ನು ಪೂರ್ಣವಾಗಿ ಮುಗಿಸುವುದರ ಜತೆಗೆ ಜೋಶಿಮಠ ಪಟ್ಟಣವನ್ನೂ ನಾಶಮಾಡುತ್ತದೆ. ಇದಕ್ಕೆ ಅವಕಾಶ ನೀಡಬಾರದು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.