ADVERTISEMENT

ನಿಧಾನಗತಿಯಲ್ಲಿ ಜೋಶಿಮಠ ರಕ್ಷಣೆ ಪ್ರಕ್ರಿಯೆ: ಸ್ಥಳೀಯರ ಪ್ರತಿಭಟನೆ

ಶಾಶ್ವತ ಪುನರ್ವಸತಿ ಹಾಗೂ ಪರಿಹಾರಕ್ಕೆ ಆಗ್ರಹಿಸಿ ಹೋರಾಟ

ಪಿಟಿಐ
Published 28 ಜನವರಿ 2023, 2:39 IST
Last Updated 28 ಜನವರಿ 2023, 2:39 IST
   

ಡೆಹ್ರಾಡೂನ್‌: ಕುಸಿಯುತ್ತಿರುವ ಐತಿಹಾಸಿಕ ಜೋಶಿಮಠ ಪಟ್ಟಣದ ರಕ್ಷಣೆಯ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ಶುಕ್ರವಾರ ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ.

ಪಟ್ಟಣ ಕುಸಿತದಿಂದ ಪರಿಣಾಮ ಎದುರಿಸುತ್ತಿರುವ ಕುಟುಂಬಗಳಿಗೆ ಪರಿಹಾರ ಹಾಗೂ ಶಾಶ್ವತ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿ ‘ಜೋಶಿಮಠ ಬಚಾವೋ ಸಂಘರ್ಷ ಸಮಿತಿ‘ ಪ್ರತಿಭಟನೆ ಮಾಡಿ ಆಗ್ರಹಿಸಿದೆ.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು, ತಪೋವನ ಟಾಕ್ಸಿ ನಿಲ್ದಾಣದಿಂದ ರ‍್ಯಾಲಿ ಆರಂಭಿಸಿ ಸಿಂಗ್‌ಧರ್‌ ವಾರ್ಡ್‌ನ ವೇದ ವೇದಂಗ ಮೈದಾನದಲ್ಲಿ ಜಮಾವಣೆಗೊಂಡರು. ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಜೋಶಿಮಠವನ್ನು ರಕ್ಷಣೆ ಮಾಡಬೇಕು ಎನ್ನುವ ತುರ್ತು ಕಾಣಿಸುತ್ತಿಲ್ಲ. ಬದ್ರಿನಾಥ ನಿವಾಸಿಗಳಿಗೆ ಪರಿಹಾರ ಹಾಗೂ ಶಾಶ್ವತ ಪುನರ್ವಸತಿ ಕಲ್ಪಿಸುವ ಹಾಗೂ ಎನ್‌ಟಿಪಿಸಿ ಯೋಜನೆಯನ್ನು ರದ್ದು ಮಾಡುವ ಭರವಸೆ ಈಡೇರಲಿಲ್ಲ‘ ಎಂದು ಜೋಶಿಮಠ ಬಚಾವೋ ಸಂಘರ್ಷ ಸಮಿತಿ ವಕ್ತಾರ ಕಮಲ್‌ ರಾತುರಿ ಹೇಳಿದರು.

ತಪೋವನ ವಿಷ್ಣುಗಢ ಜಲ ವಿದ್ಯುತ್‌ ಯೋಜನೆಗೆ ರಾಷ್ಟ್ರೀಯ ಶಾಖೋತ್ಪನ್ನ ನಿಗಮ 12 ಕಿ.ಮಿ ಸುರಂಗ ಕೊರೆಯುತ್ತಿರುವುದೇ ಇದಕ್ಕೆ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.