ADVERTISEMENT

ಕೋವಿಡ್‌: ವಾಕ್ಚಾತುರ್ಯದ ಕಥೆಗಳಿಂದ ಜೀವ ಉಳಿಸಲಾಗದು– ರಾಹುಲ್‌ ಗಾಂಧಿ ವಾಗ್ದಾಳಿ

ಪಿಟಿಐ
Published 27 ಅಕ್ಟೋಬರ್ 2021, 7:31 IST
Last Updated 27 ಅಕ್ಟೋಬರ್ 2021, 7:31 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಕೋವಿಡ್‌ ಲಸಿಕೆ ನೀಡುವುದರ ಮೂಲಕ ಜೀವಗಳನ್ನು ಉಳಿಸಬಹುದೇ ಹೊರತು, ವಾಕ್ಚಾತುರ್ಯದ ಕಥೆಗಳಿಂದಲ್ಲ ಎಂದಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ದೇಶದಲ್ಲಿ ಲಸಿಕೆ ಪಡೆಯಬೇಕಾದ ಜನರ ಸಂಖ್ಯೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಲಸಿಕಾ ಅಭಿಯಾನವು 100 ಕೋಟಿ ಡೋಸ್‌ ಮೈಲಿಗಲ್ಲನ್ನು ಸಾಧಿಸುವಲ್ಲಿ ಭಾರತೀಯ ವಿಜ್ಞಾನಿಗಳು ಮತ್ತು ಸಂಶೋಧಕರ ಶ್ರಮವನ್ನು ಶ್ಲಾಘಿಸಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬರೆದಿರುವ ಪತ್ರಿಕಾ ಲೇಖನವನ್ನು ರಾಹುಲ್‌ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೋವಿಡ್‌ ವಿರುದ್ಧ ಮಕ್ಕಳೂ ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ದೊರೆಯಬೇಕಿದೆ ಎಂದು ರಾಹುಲ್‌ ಒತ್ತಿ ಹೇಳಿದ್ದಾರೆ.

ADVERTISEMENT

ಸೋನಿಯಾ ಗಾಂಧಿ ಅವರ ಲೇಖನವನ್ನು ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್‌, ಪ್ರಧಾನಿ ಅವರು ಲಸಿಕೆ ಉಚಿತ ಎಂದು ಒತ್ತಿಹೇಳುತ್ತಾರೆ, ಆದರೆ ಅವು ಯಾವಾಗಲೂ ಉಚಿತವಾಗಿರುತ್ತವೆ ಎಂಬುದನ್ನು ಹೇಳಲು ಉದ್ದೇಶಪೂರ್ವಕವಾಗಿಯೇ ಮರೆತುಬಿಡುತ್ತಾರೆ. ಇದು ಬಿಜೆಪಿ ಸರ್ಕಾರವು ಭಾರತದ ಸಾರ್ವತ್ರಿಕ ಉಚಿತ ಲಸಿಕಾ ನೀತಿಯಿಂದ ದೂರ ಸರಿದಂತೆ ಕಾಣುತ್ತದೆ ಎಂದು ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.