ADVERTISEMENT

ಬಿಜೆಪಿ ಕುಟುಂಬದಲ್ಲಿ ಸ್ಥಾನ ನೀಡಿದ ಮೋದಿ, ಶಾಗೆ ಧನ್ಯವಾದಗಳು: ಸಿಂಧಿಯಾ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 11:15 IST
Last Updated 11 ಮಾರ್ಚ್ 2020, 11:15 IST
ಜ್ಯೋತಿರಾದಿತ್ಯ ಸಿಂಧಿಯಾ ಸುದ್ದಿಗೋಷ್ಠಿ
ಜ್ಯೋತಿರಾದಿತ್ಯ ಸಿಂಧಿಯಾ ಸುದ್ದಿಗೋಷ್ಠಿ   

ನವದೆಹಲಿ: ಕಾಂಗ್ರೆಸ್ ಪಕ್ಷದೊಂದಿಗಿದ್ದ 18 ವರ್ಷಗಳ ನಂಟು ತೊರೆದು ಜ್ಯೋತಿರಾದಿತ್ಯ ಸಿಂಧಿಯಾ ಬುಧವಾರ ಬಿಜೆಪಿ ಸೇರಿದ್ದಾರೆ.

ಬಿಜೆಪಿ ಸೇರಿದ ನಂತರ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ನನ್ನಕನಸು ನನಸಾಗಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯ ಮುಖ್ಯಾಂಶಗಳು

- ಬಿಜೆಪಿ ಕುಟುಂಬದಲ್ಲಿ ತನಗೆ ಸ್ಥಾನ ನೀಡಿದ್ದಕ್ಕೆಪ್ರಧಾನಿ ನರೇಂದ್ರ ಮೋದಿ ,ಗೃಹ ಸಚಿವ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರಿಗೆ ಧನ್ಯವಾದಗಳು. ನನ್ನ ಜೀವನದಲ್ಲಿ ಮಹತ್ವದ ಎರಡು ದಿನಗಳಿವೆ. 2011 ಸೆಪ್ಟೆಂಬರ್ 20, ಅಂದು ನಾನು ಅಪ್ಪನನ್ನು ಕಳೆದುಕೊಂಡೆ. ಅದು ನನ್ನ ಜೀವನವನ್ನು ಬದಲಿಸಿದ ದಿನವಾಗಿತ್ತು. ಎರಡನೇ ದಿನ ಅಂದರೆ 2020 ಮಾರ್ಚ್ 10, ಅಪ್ಪನ 75ನೇ ಹುಟ್ಟುಹಬ್ಬ. ಇದೇ ದಿನ ನಾನು ಹೊಸ ನಿರ್ಧಾರವೊಂದನ್ನು ಕೈಗೊಂಡೆ. ನಾನು ಜನರ ಸೇವೆಯಲ್ಲಿ ನಂಬಿಕೆ ಇಟ್ಟವನು ಮತ್ತು ಅದನ್ನು ಸಾಧಿಸಲು ರಾಜಕೀಯವೇ ದಾರಿ.

- ಕಾಂಗ್ರೆಸ್‌ನಲ್ಲಿದ್ದ ನನ್ನ ಅಪ್ಪ ದೇಶ ಮತ್ತು ನಮ್ಮ ರಾಜ್ಯಕ್ಕಾಗಿ ದುಡಿದಿದ್ದರು. ಆದರೆ ಈಗಿನ ಪರಿಸ್ಥಿತಿ ಹೇಗಿದೆ ಅಂದರೆ ದೇಶಕ್ಕಾಗಿ ದುಡಿಯಲು ನನಗೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಮೊದಲಿನಂತಿಲ್ಲ.

- ಇಂದಿನ ಕಾಂಗ್ರೆಸ್ ಪಕ್ಷ ವಾಸ್ತವವನ್ನು ಕಡೆಗಣಿಸುತ್ತದೆ. ಅಲ್ಲೊಂದು ಜಡತ್ವವಿದ್ದು, ಹಲವರಿಗೆ ನಾಯಕತ್ವದ ಅವಕಾಶ ನೀಡುತ್ತಿಲ್ಲ. ದೇಶದಾದ್ಯಂತ ಇದೇ ಪರಿಸ್ಥಿತಿ ಇದೆ. ಆದರೆ ಮಧ್ಯಪ್ರದೇಶದಲ್ಲಿ ನಾವು ಜತೆಯಾಗಿ ಕಂಡ ಕನಸುಗಳು ಒಡೆದುಹೋಗಿವೆ.

- ಅಧಿಕಾರಕ್ಕೇರಿ 10 ದಿನಗಳಲ್ಲಿ ರೈತರ ಸಾಲ ಮನ್ನಾಮಾಡುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಆದರೆ 18 ತಿಂಗಳುಗಳಾದರೂ ಅದನ್ನು ನೆರವೇರಿಸಿಲ್ಲ. ಈ ಕಾಲಾವಧಿಯಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ.

- ಮಧ್ಯಪ್ರದೇಶದಲ್ಲಿ ವರ್ಗಾವಣೆ ದಂಧೆ ಮತ್ತು ಮರಳು ಮಾಫಿಯಾ ಇದೆ. ನಾನು ದೇಶದ ಅಭಿವೃದ್ಧಿಗಾಗಿ ಈ ನಿರ್ಧಾರ ಕೈಗೊಂಡೆ. ದೇಶದ ಜನರು ಎರಡು ಬಾರಿ ಬಿಜೆಪಿಗೆ ಜನಾದೇಶ ನೀಡಿ ಅಧಿಕಾರಕ್ಕೇರಿಸಿದ್ದಾರೆ. ದೇಶದ ಪ್ರಗತಿಗಾಗಿ ದುಡಿಯುವ ಸಾಮರ್ಥ್ಯ ಮೋದಿಯವರಿಗೆ ಇದೆ. ವಿವಿಧ ವಲಯಗಳಲ್ಲಿ ಅವರು ತಂದ ಅಭಿವೃದ್ಧಿ ಕಾರ್ಯಗಳು ಶ್ಲಾಘನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.