ನವದೆಹಲಿ:73ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆಯಲ್ಲಿ ಮಾಡಿದ ಭಾಷಣದ ಕನ್ನಡ ಅವತರಣಿಕೆಯೂಟ್ಯೂಬ್ನಲ್ಲಿ ಲಭ್ಯವಿದೆ.
ಆಲ್ ಇಂಡಿಯಾ ರೇಡಿಯೊ ಬೆಂಗಳೂರು ಯೂಟ್ಯೂಬ್ ಚಾನೆಲ್ನಲ್ಲಿ ಈ ಅವತರಣಿಕೆ ಲಭ್ಯವಾಗಿದ್ದು, ಕನ್ನಡ ಧ್ವನಿ ಸುಬ್ರಮಣ್ಯ ಅವರದ್ದಾಗಿದೆ.
ಐತಿಹಾಸಿಕ ಕೆಂಪುಕೋಟೆಯಿಂದ ನನ್ನ ಸಹ-ಭಾರತೀಯರನ್ನುದ್ದೇಶಿಸಿ ಮಾತನಾಡಲು ಗೌರವವೆನಿಸುತ್ತದೆ. ನನ್ನ ಭಾಷಣವನ್ನು ಕನ್ನಡದಲ್ಲಿ ಹಂಚಿಕೊಳ್ಳುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ತಮಿಳು, ಮಲಯಾಳಂ, ತೆಲುಗು. ಒಡಿಯಾ, ಬಂಗಾಳಿ ಭಾಷೆಗಳಲ್ಲಿಯೂ ಈ ಭಾಷಣ ಲಭ್ಯವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.