ADVERTISEMENT

UP Election: ಕಾನ್ಪುರದಲ್ಲಿ ಹಾಲು, ಬ್ರೆಡ್ ಮಾರಾಟದ ವೇಳೆ ಮತದಾನ ಜಾಗೃತಿ ಸಂದೇಶ

ಐಎಎನ್ಎಸ್
Published 13 ಫೆಬ್ರುವರಿ 2022, 6:12 IST
Last Updated 13 ಫೆಬ್ರುವರಿ 2022, 6:12 IST
ಸಾಂದರ್ಭಿಕ ಚಿತ್ರ – ಪಿಟಿಐ
ಸಾಂದರ್ಭಿಕ ಚಿತ್ರ – ಪಿಟಿಐ   

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಇದೇ 20ರಂದು ಮತದಾನ ನಡೆಯಲಿದೆ. ಮತ ಚಲಾಯಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಹೊಸ ತಂತ್ರದ ಮೊರೆಹೋಗಿದೆ.

ಹಾಲು, ಬ್ರೆಡ್ ಮಾರಾಟದ ವೇಳೆ ಗ್ರಾಹಕರಿಗೆ ಮತದಾನ ಜಾಗೃತಿ ಸಂದೇಶ ಕಳುಹಿಸಲು ಆಡಳಿತ ಮುಂದಾಗಿದೆ. ಮುಂದಿನ ವಾರದಿಂದ ಹಾಲು, ಬ್ರೆಡ್ ಖರೀದಿಸಿದ ಗ್ರಾಹಕರಿಗೆ ‘ಫೆಬ್ರುವರಿ 20ರಂದು ಕಾನ್ಪುರ ಮತದಾನ’ ಎಂಬ ಸಂದೇಶ ಕಳುಹಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿ ನೇಹಾ ಶರ್ಮಾ ಈ ಯೋಜನೆ ರೂಪಿಸಿದ್ದು, ಬ್ರೆಡ್ ಮತ್ತು ಹಾಲು ಮಾರಾಟ ಕಂಪನಿಗಳ ಜತೆ ಈಗಾಗಲೇ ಸಭೆ ನಡೆಸಿದ್ದಾರೆ.

ಈ ಪ್ರಸ್ತಾವಕ್ಕೆ ಜಿಎಸ್‌ಟಿ ಮತ್ತು ಆಹಾರ ಸುರಕ್ಷತಾ ಇಲಾಖೆಯೂ ಬೆಂಬಲ ಸೂಚಿಸಿದೆ. ಒಂದು ವಾರದಲ್ಲಿ 2.5 ಲಕ್ಷ ಮನೆಗಳಿಗೆ ಮತದಾನ ಜಾಗೃತಿ ಸಂದೇಶ ಕಳುಹಿಸುವುದಾಗಿ ಹಾಲಿನ ಉತ್ಪನ್ನ, ಬ್ರೆಡ್ ತಯಾರಕರು ಭರವಸೆ ನೀಡಿದ್ದಾರೆ.

ಈ ಅಭಿಯಾನದಲ್ಲಿ ಸಕ್ರಿಯವಾಗಿ ಕೈಜೋಡಿಸುವಂತೆ ಎಲ್ಲ ಪ್ರತಿನಿಧಿಗಳಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.