ADVERTISEMENT

ವಿಧಾನ ಪರಿಷತ್‌ ಚುನಾವಣೆ: ಬಿಜೆಪಿಯಿಂದ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2021, 16:08 IST
Last Updated 19 ನವೆಂಬರ್ 2021, 16:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ನಡೆಯಲಿರುವ ಒಟ್ಟು 25 ವಿಧಾನ ಪರಿಷತ್‌ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಬಿಜೆಪಿಯು ಶುಕ್ರವಾರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಕ್ಷೇತ್ರ ಮತ್ತು ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

  1. ಕೊಡಗು – ಸುಜಾ ಕುಶಾಲಪ್ಪ
  2. ದಕ್ಷಿಣ ಕನ್ನಡ– ಕೋಟ ಶ್ರೀನಿವಾಸ ಪೂಜಾರಿ
  3. ಚಿಕ್ಕಮಗಳೂರು– ಎಂ.ಕೆ ಪ್ರಾಣೇಶ್‌
  4. ಶಿವಮೊಗ್ಗ– ಡಿ.ಎಸ್‌ ಅರುಣ್‌
  5. ಧಾರವಾಡ – ಪ್ರದೀಪ್‌ ಶೆಟ್ಟರ್‌
  6. ಬೆಳಗಾವಿ – ಮಹಂತೇಶ ಕವಟಗಿಮಠ
  7. ಕಲಬುರಗಿ – ಬಿ.ಜಿ ಪಾಟೀಲ್‌
  8. ಚಿತ್ರದುರ್ಗ – ಕೆ.ಎಸ್‌ ನವೀನ್‌
  9. ಮೈಸೂರು – ರಘು ಕೌಟಿಲ್ಯ
  10. ಹಾಸನ – ವಿಶ್ವನಾಥ್‌
  11. ಉತ್ತರ ಕನ್ನಡ– ಗಣಪತಿ ಉಳ್ವೇಕರ್‌
  12. ಬೀದರ್‌– ಪ್ರಕಾಶ್‌ ಖಂಡ್ರೆ
  13. ಬೆಂಗಳೂರು – ಗೋಪಿನಾಥ್‌ ರೆಡ್ಡಿ
  14. ಮಂಡ್ಯ – ಮಂಜು ಕೆ.ಆರ್‌ ಪೇಟೆ
  15. ಕೋಲಾರ – ಕೆ.ಎನ್‌ ವೇಣುಗೋಪಾಲ್‌
  16. ರಾಯಚೂರು – ವಿಶ್ವನಾಥ್‌ ಎ ಬನಹಟ್ಟಿ
  17. ಬೆಂಗಳೂರು ಗ್ರಾಮಾಂತರ– ಬಿ.ಎಂ ನಾರಾಯಣಸ್ವಾಮಿ
  18. ಬಳ್ಳಾರಿ – ವೈ ಎಂ ಸತೀಶ್‌
  19. ತುಮಕೂರು – ಎನ್‌. ಲೋಕೇಶ್‌
  20. ವಿಜಯಪರು – ಪಿ.ಚ್‌ ಪೂಜಾರ್‌

ಚುನಾವಣೆಗೆ ನಾಮಪತ್ರ ಸಲ್ಲಿಸಲು ನ. 23 ಕೊನೆ ದಿನವಾಗಿದ್ದು, ನ. 24ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ನ. 26 ಕಡೆ ದಿನವಾಗಿರಲಿದೆ.

ADVERTISEMENT

ಡಿ. 10ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಡಿ. 14ರಂದು ಫಲಿತಾಂಶ ಹೊರಬೀಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.