ADVERTISEMENT

ಎಬಿಸಿ ಅಧ್ಯಕ್ಷರಾಗಿ ಕರುಣೇಶ್‌ ಬಜಾಜ್ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 16:16 IST
Last Updated 2 ಸೆಪ್ಟೆಂಬರ್ 2025, 16:16 IST
ಕರುಣೇಶ್‌ ಬಜಾಜ್
ಕರುಣೇಶ್‌ ಬಜಾಜ್   

ಬೆಂಗಳೂರು: ಆಡಿಟ್‌ ಬ್ಯೂರೊ ಆಫ್‌ ಸರ್ಕ್ಯುಲೇಷನ್‌ (ಎಬಿಸಿ) ಸಂಸ್ಥೆಯ 2025–26ನೇ ಸಾಲಿನ ಅಧ್ಯಕ್ಷರಾಗಿ ಐಟಿಸಿ ಲಿಮಿಟೆಡ್‌ನ ಮಾರುಕಟ್ಟೆ ಮತ್ತು ರಫ್ತು ವಿಭಾಗದ ಉಪಾಧ್ಯಕ್ಷರಾಗಿರುವ ಕರುಣೇಶ್‌ ಬಜಾಜ್‌ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

25ಕ್ಕಿಂತಲೂ ಅಧಿಕ ವರ್ಷಗಳಿಂದ ಐಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರುಣೇಶ್ ಅವರು ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕ, ವಿವಿಧ ವಿಭಾಗಗಳ ಮುಖ್ಯಸ್ಥರು ಸೇರಿದಂತೆ ಹಲವು ಹಿರಿಯ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅದಕ್ಕೂ ಮೊದಲು ಭಾರತಿ ರಿಟೇಲ್ ಲಿಮಿಟೆಡ್‌ನ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದರು.

ಬೆನೆಟ್‌, ಕೋಲ್‌ಮನ್‌ ಆ್ಯಂಡ್ ಕಂಪನಿ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಮುದ್ರಣ ವಿಭಾಗ) ಮೋಹಿತ್‌ ಜೈನ್‌ ಅವರು ಉಪಾಧ್ಯಕ್ಷರಾಗಿ ಮತ್ತು ಆದಿಲ್ ಕಾಸದ್‌ ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ADVERTISEMENT

ಜಾಹಿರಾತು ಪ್ರತಿನಿಧಿಗಳು: ಕರುಣೇಶ್‌ ಬಜಾಜ್‌ -ಅಧ್ಯಕ್ಷ, ಅನಿರುದ್ಧ ಹಲ್‌ಧರ್ (ಟಿವಿಎಸ್‌ ಮೋಟರ್‌ ಕಂಪನಿ ಲಿಮಿಟೆಡ್‌), ಪಾರ್ಥೋ ಬ್ಯಾನರ್ಜಿ (ಮಾರುತಿ ಸುಜುಕಿ ಇಂಡಿಯಾ ಲಿ.)

ಮುದ್ರಣ ಪ್ರತಿನಿಧಿಗಳು: ಮೋಹಿತ್ ಜೈನ್‌ (ಅಧ್ಯಕ್ಷ), ಧ್ರುವ ಮುಖರ್ಜಿ (ಎಬಿಪಿ ಪ್ರೈ.ಲಿ)– ಗೌರವ ಕಾರ್ಯದರ್ಶಿ, ರಿಯಾದ್‌ ಮ್ಯಾಥ್ಯು (ಮಲಯಾಳ ಮನೋರಮಾ ಕಂ. ಲಿ.), ಗಿರೀಶ್‌ ಅಗರ್‌ವಾಲ್ (ಡಿ.ಬಿ ಕಾರ್ಪ್ ಲಿ.), ಶೈಲೇಶ್‌ ಗುಪ್ತಾ (ಜಾಗರಣ್‌ ಪ್ರಕಾಶನ್‌ ಲಿ.), ಕರಣ್‌ ದಾರ್‍ದಾ (ಲೋಕಮತ್‌ ಮೀಡಿಯಾ ಪ್ರೈ.ಲಿ), ಪ್ರತಾಪ್‌ ಪವಾರ್‌ (ಸಕಾಳ್‌ ಪೇಪರ್ಸ್‌), ಆದಿಮೂಲಂ(ದಿನಮಲರ್‌)

ಜಾಹೀರಾತು ಸಂಸ್ಥೆಗಳ ಪ್ರತಿನಿಧಿಗಳು: ವಿಕ್ರಂ ಸಖುಜಾ (ಮ್ಯಾಡಿಸನ್ ಕಮ್ಯುನಿಕೇಶನ್ಸ್ ಪ್ರೈ.ಲಿ)– ಗೌರವ ಖಜಾಂಚಿ, ಶ್ರೀನಿವಾಸನ್‌ ಕೆ.ಸ್ವಾಮಿ (ಆರ್‌ಕೆ ಸ್ವಾಮಿ ಬಿಬಿಡಿಒ ಪ್ರೈ.ಲಿ), ಪ್ರಶಾಂತ್‌ ಕುಮಾರ್‌ (ಗ್ರೂಪ್ ಎಮ್‌ ಮೀಡಿಯ ಇಂಡಿಯಾ ಪ್ರೈ.ಲಿ.), ವೈಶಾಲಿ ವರ್ಮ (ಇನಿಷಿಯೇಟಿವ್‌ ಮೀಡಿಯ ಇಂಡಿಯಾ ಪ್ರೈ.ಲಿ.), ಸೇಜಲ್ ಶಾ (ಪಬ್ಲಿಸಿಸ್ ಮೀಡಿಯ ಇಂಡಿಯಾ ಗ್ರೂಪ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.