ಟಿವಿಕೆ ಪಕ್ಷದ ವಿಜಯ್ ರ‍್ಯಾಲಿ (ಸಂಗ್ರಹ ಚಿತ್ರ)
ಕರೂರು (ಪಿಟಿಐ): ಟಿವಿಕೆ ಮನವಿ ಆಧರಿಸಿ 500 ಪೊಲೀಸ್ ಸಿಬ್ಬಂದಿಯನ್ನು ರ್‍ಯಾಲಿಗೆ ನಿಯೋಜಿಸಲಾಗಿತ್ತು. ಇದರಲ್ಲಿ ಒಬ್ಬ ಎಸ್‌ಪಿ, ಮೂವರು ಎಎಸ್‌ಪಿ, ನಾಲ್ವರು ಡಿಎಸ್ಪಿ, ಏಳು ಇನ್‌ಸ್ಪೆಕ್ಟರ್‌ಗಳು, 58 ಸಬ್ ಇನ್ ಸ್ಪೆಕ್ಟರ್‌ಗಳೂ ಇದ್ದರು ಎಂದು ತಮಿಳುನಾಡಿನ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಸ್. ಡೇವಿಡ್‌ಸನ್ ದೇವಶಿರ್ವತಂ ತಿಳಿಸಿದರು.
ಕರೂರು ರ್‍ಯಾಲಿಗೆಂದು ಜನರು ಶನಿವಾರ ಮಧ್ಯಾಹ್ನ 12 ಗಂಟೆ ಯಿಂದಲೇ ಜಮಾಯಿಸಿದ್ದರು. ಆದರೆ ನಟ ವಿಜಯ್ ಅವರು ಕರೂರಿಗೆ ಬಂದಿದ್ದು ಸಂಜೆ 6 ಗಂಟೆಗೆ. ಇಷ್ಟು ದೀರ್ಘ ಅವಧಿ ಆಹಾರ, ನೀರು ಇಲ್ಲದೆ ಜನ ಬಸವಳಿದಿದ್ದರು ಎಂದು ಅವರು ವಿವರಿಸಿದರು. ವಿಜಯ್ ಅವರು ಕಾರ್ಯಕ್ರಮ ನಡೆಯುವ ಪ್ರದೇಶಕ್ಕೆ ಬರುವ ಮಾರ್ಗದಲ್ಲಿ ದೊಡ್ಡ ಸಂಖ್ಯೆಯ ಜನ ಅವರ ವಾಹನವನ್ನು ಹಿಂಬಾಲಿಸಿದರು. ಇದು ಅವರು ನಿರ್ದಿಷ್ಟ ಪ್ರದೇಶಕ್ಕೆ ಬರುವುದನ್ನು ಇನ್ನಷ್ಟು ತಡವಾಗಿಸಿತು ಎಂದು ಅವರು ವಿವರಿಸಿದರು.
ಇದೇ ಸಮಯದಲ್ಲಿ ಕಾಲ್ತುಳಿತ ಸಂಭವಿಸಿದೆ. ದುರಂತಕ್ಕೆ ನಿಖರ ಕಾರಣ ಏನು ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.