ADVERTISEMENT

ಕಾಶ್ಮೀರದಲ್ಲಿ ಹೂಡಿಕೆ ವೃದ್ಧಿ, ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆ: ಅಮಿತ್‌ ಶಾ 

ಪಿಟಿಐ
Published 4 ಡಿಸೆಂಬರ್ 2021, 11:44 IST
Last Updated 4 ಡಿಸೆಂಬರ್ 2021, 11:44 IST
   

ನವದೆಹಲಿ: ’ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಜಮ್ಮು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಿದೆ. ಹೂಡಿಕೆ ಮತ್ತು ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ’ ಎಂದು ಗೃಹಸಚಿವ ಅಮಿತ್‌ ಶಾ ಶನಿವಾರ ಪ್ರತಿಪಾದಿಸಿದರು.

ಎಚ್‌.ಟಿ ನಾಯಕತ್ವ ಶೃಂಗ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಸಂವಿಧಾನದ ವಿಧಿ 370 ಮತ್ತು 35 ಎ ರದ್ದು ಆಗಲಿದೆ ಎಂದು ಯಾರೂ ನಂಬಿರಲಿಲ್ಲ. ಆದರೆ ಪ್ರಧಾನಿ 2019ರಲ್ಲಿ ಅದನ್ನು ಮಾಡಿದರು ಎಂದರು.

‘ಈಗ ಅಲ್ಲಿ ಶಾಂತಿ ನೆಲೆಸಿದೆ ಎಂದು ನಾನು ಹೇಳಬಲ್ಲೆ. ಜೊತೆಗೆ ಹೂಡಿಕೆ ಹೆಚ್ಚುತ್ತಿದೆ. ಪ್ರವಾಸಿಗರು ಬರುತ್ತಿದ್ದಾರೆ. ಕಾಶ್ಮೀರ ನಿಧಾನಗತಿಯಲ್ಲಿ ಸಹಜ ಸ್ಥಿತಿಗೆ ಮರಳುತ್ತಿದ್ದು, ದೇಶದ ಜೊತೆಗೆ ನಿಲ್ಲುತ್ತಿದೆ’ ಎಂದು ಹೇಳಿದರು.

ADVERTISEMENT

ಕೋವಿಡ್‌ ನಿರ್ವಹಣೆ ಕುರಿತು ಪ್ರಧಾನಿಯನ್ನು ಶ್ಲಾಘಿಸಿದ ಶಾ, 2014ರಲ್ಲಿ ನಮಗೆ ರಾಜಕೀಯ ಸ್ಥಿರತೆ ಬಂದಿದೆ. ಅದಕ್ಕೂ ಹಿಂದೆ ಸಮ್ಮಿಶ್ರ ಸರ್ಕಾರಗಳ ಯುಗ ಇತ್ತು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.