ADVERTISEMENT

ಕೌರವರು ಪ್ರಣಾಳ ಶಿಶುಗಳು, ಡಾರ್ವಿನ್‍ನ ವಿಕಾಸವಾದ ಅಪೂರ್ಣ: ಆಂಧ್ರ ವಿವಿ ಉಪಕುಲಪತಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 11:31 IST
Last Updated 5 ಜನವರಿ 2019, 11:31 IST
   

ಜಲಂಧರ್:ಮಹಾಭಾರತದಲ್ಲಿ ಕೌರವರು ಪ್ರಣಾಳ ಶಿಶುಗಳಾಗಿದ್ದರು ಎಂದು ಆಂಧ್ರ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಜಿ. ನಾಗೇಶ್ವರ್ ರಾವ್ ಹೇಳಿದ್ದಾರೆ.

ಶುಕ್ರವಾರ ಜಲಂಧರ್‌ನಲ್ಲಿ ನಡೆದ ಭಾರತೀಯ ವಿಜ್ಞಾನಸಮಾವೇಶದMeet the Scientist Sessionಎಂಬ ಕಾರ್ಯಕ್ರಮದಲ್ಲಿ 'Science In Indian Way of Life' ಎಂಬ ವಿಷಯದ ಬಗ್ಗೆ ಭಾಷಣ ಮಾಡಿದ ರಾವ್, ಗಾಂಧಾರಿ 100 ಕೌರವರಿಗೆ ಜನ್ಮ ನೀಡಿದ್ದಾಳೆ. ಆಕೆ ಅಷ್ಟೊಂದು ಮಕ್ಕಳಿಗೆ ಜನ್ಮ ನೀಡಲು ಹೇಗೆ ಸಾಧ್ಯ? ಒಬ್ಬ ಮನುಷ್ಯನಿಂದ ಇದು ಸಾಧ್ಯವಾದುದೇ?ಓರ್ವ ಮಹಿಳೆ ತನ್ನ ಜೀವಿತಾವಧಿಯಲ್ಲಿ 100 ಮಕ್ಕಳಿಗೆ ಜನ್ಮ ನೀಡಲು ಹೇಗೆ ಸಾಧ್ಯ? ಎಂದುಸಭಿಕರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

ಈಗ ನಾವು ಪ್ರಣಾಳ ಶಿಶುಗಳ ಬಗ್ಗೆ ಹೇಳಲೇಬೇಕಿದೆ.100 ಭ್ರೂಣಗಳನ್ನು 100 ಮಣ್ಣಿನ ಮಡಿಕೆಯಲ್ಲಿಡಲಾಗಿತ್ತು ಎಂದು ಮಹಾಭಾರತದಲ್ಲಿ ಹೇಳಲಾಗಿದೆ.ಹಾಗಾಗಿ ಅದು ಪ್ರಣಾಳ ಶಿಶುಗಳು ಅಲ್ಲವೇ? ಸಾವಿರ ವರ್ಷಗಳ ಹಿಂದೆಯೇ ನಮ್ಮ ದೇಶದಲ್ಲಿ ಕಾಂಡಕೋಶ (Stem cells) ಬಗ್ಗೆ ಸಂಶೋಧನೆ ನಡೆದಿತ್ತು ಎಂದಿದ್ದಾರೆ ರಾವ್.

ADVERTISEMENT

ಅದೇ ವೇಳೆಕ್ಷಿಪಣಿಗಳು ಕೂಡಾ ಭಾರತದಲ್ಲಿ ಸಾವಿರ ವರ್ಷಗಳ ಹಿಂದೆಯೇ ಇತ್ತು ಎಂದು ರಾವ್ ವಾದಿಸಿದ್ದಾರೆ.

ಶ್ರೀರಾಮ ಅಸ್ತ್ರ ಮತ್ತು ಶಸ್ತ್ರಗಳನ್ನು ಬಳಸಿದರೆ, ಮಹಾವಿಷ್ಣು ವಿಷ್ಣು ಚಕ್ರವೆಂಬ ನಿಯಂತ್ರಿತ ಕ್ಷಿಪಣಿ ಬಳಸುತ್ತಿದ್ದರು.ಈ ಚಕ್ರ ಗುರಿ ಮುಟ್ಟಿ ಅಲ್ಲಿ ಉದ್ದೇಶಿತ ಕಾರ್ಯ ಪೂರ್ತಿಗೊಳಿಸಿದ ನಂತರ ಮಹಾವಿಷ್ಣುವಿನ ಬಳಿಗೆ ವಾಪಸ್ ಬರುತ್ತಿತ್ತು,
ನಾವು ಈಗboomerang ಬಗ್ಗೆ ಹೇಳುತ್ತಿದ್ದೇವೆ.ಆದರೆ ಮಹಾವಿಷ್ಣು ಆ ಕಾಲದಲ್ಲಿಯೇ ಅದನ್ನು ಬಳಸುತ್ತಿದ್ದರು.

ರಾವಣ ಕೇವಲ ಪುಷ್ಪಕವಿಮಾನವನ್ನು ಮಾತ್ರವಲ್ಲ 24 ವಿಧದ ವಿಮಾನಗಳನ್ನು ಬಳಸುತ್ತಿದ್ದನು.ಶ್ರೀಲಂಕಾದಲ್ಲಿ ಹಲವಾರು ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ್ದ ಈತ ವಿವಿಧ ಉದ್ದೇಶಗಳಿಗಾಗಿ ವಿವಿಧ ರೀತಿಯ ವಿಮಾನ ಬಳಸುತ್ತಿದ್ದನು.

ದಶಾವತಾರವು ಚಾರ್ಲ್ಸ್ ಡಾರ್ವಿನ್‍ನ ವಿಕಾಸವಾದಕ್ಕಿಂತ ಹೆಚ್ಚು ಮಹತ್ತರವಾದುದು ಎಂದಿದ್ದಾರೆ ರಾವ್.
ಡಾರ್ವಿನ್‍ನ ವಿಕಾಸವಾದ ಅಪೂರ್ಣವಾಗಿತ್ತು.ದಶಾವತಾರದಲ್ಲಿ ವಿಷ್ಣುವಿನ ಅವತಾರ ಮತ್ಸ್ಯ (ಮೀನು) ನಿಂದ ಶುರುವಾಗಿ ಆಮೇಲೆ ಅರ್ಧ ಪ್ರಾಣಿ, ಅರ್ಧ ಮನುಷ್ಯ ನರಸಿಂಹ ಅವತಾರವಾಗುತ್ತದೆ. ಇದಾದ ನಂತರವಾಮನ ಅವತಾರವಾಗುತ್ತದೆ. ಪಾಶ್ಚಾತ್ಯರು ಮನುಷ್ಯನ ವಿಕಸನವರೆಗೆ ವಿಕಾಸವಾದ ಮಂಡಿಸುತ್ತಾರೆ. ಆದರೆ ದಶಾವತಾರದಲ್ಲಿ ವಾಮನ ಅವತಾರದ ನಂತರ ಪ್ರಬುದ್ಧ ಮನುಷ್ಯರಾದರಾಮ ಮತ್ತು ಕೃಷ್ಣರ ಅವತಾರವಿದೆ ಎಂದು ರಾವ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.