ಡೆಹ್ರಾಡೂನ್: ಕೇದಾರನಾಥಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಈ ವರ್ಷ ದಾಖಲೆ ಪ್ರಮಾಣದಷ್ಟು ಹೆಚ್ಚಳವಾಗಿದೆ. ಈ ವರ್ಷ ಯಾತ್ರಾಅವಧಿಯ 50 ದಿನಗಳಲ್ಲಿ 7.62ಲಕ್ಷ ಮಂದಿ ಭೇಟಿ ನೀಡಿದ್ದಾರೆ ಎಂದು ರುದ್ರಪ್ರಯಾಗ್‌ನ ಜಿಲ್ಲಾಧಿಕಾರಿ ಮಂಗೇಶ್ ಘಿಲ್ಡಿಯಾಲ್ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಒಟ್ಟಾರೆ 7.32 ಲಕ್ಷ ಯಾತ್ರಿಗಳು ಭೇಟಿ ನೀಡಿದ್ದರು.ಯಾತ್ರಾ ಅವಧಿ ಮುಗಿಯಲು ಇನ್ನೂ ಮೂರು ತಿಂಗಳಿದ್ದು, ಯಾತ್ರಿಗಳ
ಸಂಖ್ಯೆ 10ಲಕ್ಷ ದಾಟಬಹುದು ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.