ADVERTISEMENT

‘ಡ್ರೋನ್ ಮೂಲಕ ಕಾಮಗಾರಿ ಮೇಲ್ವಿಚಾರಣೆ’

ಪಿಟಿಐ
Published 12 ಅಕ್ಟೋಬರ್ 2019, 20:00 IST
Last Updated 12 ಅಕ್ಟೋಬರ್ 2019, 20:00 IST
   

ನವದೆಹಲಿ: ಕೇದಾರನಾಥದಲ್ಲಿ ಸರ್ವಋತು ಬಳಕೆಯ ರಸ್ತೆಗಳ ನಿರ್ಮಾಣ ಸೇರಿದಂತೆ ಇತರೆ ಪುನರ್‌ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದು, ಇದನ್ನು ಡ್ರೋನ್‌ ಮೂಲಕ ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಶನಿವಾರ ತಿಳಿಸಿದ್ದಾರೆ.

ಉತ್ತಮ ಆಡಳಿತಕ್ಕಾಗಿ ತಂತ್ರಜ್ಞಾನ ಬಳಕೆ ಅಗತ್ಯ ಎಂದು ಹೇಳಿದ ಶಾ, ‘ಡ್ರೋನ್‌ ಬಳಸಿ ಎಲ್ಲಾ ಕಾಮಗಾರಿಗಳ ಮೇಲ್ವಿಚಾರಣೆ ನಡೆಸುತ್ತಿರುವುದರಿಂದ, ಖುದ್ದು ನಿಗಾ ವಹಿಸಲು ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಬೇಕಾದ ಅವಶ್ಯಕತೆಯೇ ಇಲ್ಲ. ಜಿಯೊ–ಟ್ಯಾಗಿಂಗ್‌ನಿಂದಾಗಿ, ಅಣೆಕಟ್ಟು ನಿರ್ಮಾಣ, ನೀರಿನ ಸಂಗ್ರಹಣೆ ಮಟ್ಟ ಕುರಿತು ಉಪಗ್ರಹ ಚಿತ್ರಗಳು ದೊರಕುತ್ತವೆ. ಇದು ಅಂತರ್ಜಾಲದ ಯಶಸ್ವಿ ಬಳಕೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT