ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅಬಕಾರಿ ನೀತಿ ಹಗರಣದ ಜತೆಗೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಇ.ಡಿ ವಿಚಾರಣೆಗೆ ಸತತ 8ನೇ ಬಾರಿಯೂ ಗೈರು ಹಾಜರಾದರು. ಆದರೆ, ಮಾ.12ರ ನಂತರ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಸಿದ್ಧ ಎಂದು ಅವರು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕೇಜ್ರಿವಾಲ್ ಅವರ ಪ್ರತಿಕ್ರಿಯೆ ಕುರಿತು ಜಾರಿ ನಿರ್ದೇಶನಾಲಯವು ಚಿಂತನೆ ನಡೆಸುತ್ತಿದೆ. ವರ್ಚುವಲ್ ಆಗಿ ಹಾಜರಾಗಲು ತನಿಖಾ ಸಂಸ್ಥೆಯು ಬಹುಶಃ ಅವಕಾಶ ನೀಡುವುದಿಲ್ಲ. ಇನ್ನೊಮ್ಮೆ ಸಮನ್ಸ್ ಜಾರಿ ಮಾಡಬಹುದು ಎಂದು ತಿಳಿಸಿವೆ.
ಲೋಕಸಭಾ ಚುನಾವಣೆಗೂ ಮೊದಲು ಕೇಜ್ರಿವಾಲ್ ಅವರನ್ನು ಬಂಧಿಸುವ ಉದ್ದೇಶವನ್ನು ಇ.ಡಿ ಹೊಂದಿದೆ ಎಂದು ಎಎಪಿ ಆರೋಪಿಸಿದೆ.
‘ಸಮನ್ಸ್‌ಗಳು ಕಾನೂನು ಬಾಹಿರವಾಗಿವೆ. ಆದಾಗಿಯೂ ವಿಚಾರಣೆ ಎದುರಿಸಲು ಸಿದ್ಧ ಎಂದು ಕೇಜ್ರಿವಾಲ್ ಹೇಳಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.