ADVERTISEMENT

ED ಕಸ್ಟಡಿಯಲ್ಲಿ ಕೇಜ್ರಿವಾಲ್‌ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ: ಎಎಪಿ

ಪಿಟಿಐ
Published 27 ಮಾರ್ಚ್ 2024, 10:29 IST
Last Updated 27 ಮಾರ್ಚ್ 2024, 10:29 IST
<div class="paragraphs"><p>ಅರವಿಂದ್ ಕೇಜ್ರಿವಾಲ್</p></div>

ಅರವಿಂದ್ ಕೇಜ್ರಿವಾಲ್

   

ನವದೆಹಲಿ: ‘ಇ.ಡಿ ವಶದಲ್ಲಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಆರೋಗ್ಯ ಹದಗೆಟ್ಟಿದೆ. ಮಧುಮೇಹಿ ಆಗಿರುವ ಅವರ ರಕ್ತದಲ್ಲಿ ಗ್ಲುಕೋಸ್‌ ಮಟ್ಟ ಏರುಪೇರಾಗುತ್ತಿದೆ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಮೂಲಗಳು ಬುಧವಾರ ಹೇಳಿವೆ.

‘ಕೇಜ್ರಿವಾಲ್‌ ಅವರ ರಕ್ತದಲ್ಲಿನ ಸಕ್ಕರೆ ಮಟ್ಟ ಒಂದು ಸಂದರ್ಭದಲ್ಲಿ 46 ಎಂಜಿಗೆ ಕುಸಿತಗೊಂಡಿತ್ತು. ಗ್ಲುಕೋಸ್‌ ಮಟ್ಟದಲ್ಲಿ ಈ ಪ್ರಮಾಣದ ಕುಸಿತ ಬಹಳ ಅಪಾಯಕಾರಿ ಎಂಬುದಾಗಿ ವೈದ್ಯರು ಹೇಳಿದ್ದಾರೆ’ ಎಂದು ಪಕ್ಷದ ಮೂಲಗಳು ಹೇಳಿವೆ.

ADVERTISEMENT

ಮಂಗಳವಾರ ಕೇಜ್ರಿವಾಲ್‌ ಅವರನ್ನು ಇ.ಡಿ ಕಸ್ಟಡಿಯಲ್ಲಿ ಭೇಟಿಯಾದ ಪತ್ನಿ ಸುನೀತಾ ಅವರು ಕೂಡ ಕೇಜ್ರಿವಾಲ್ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಅವರಿಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದರು.

ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕಳೆದ ವಾರ ಕೇಜ್ರಿವಾಲ್‌ ಅವರನ್ನು ಇ.ಡಿ ಬಂಧಿಸಿತ್ತು. ಮಾರ್ಚ್‌ 28ರವರೆಗೆ ಇ.ಡಿ ಕಸ್ಟಡಿಯಲ್ಲಿ ಕೇಜ್ರಿವಾಲ್‌ ಅವರ ವಿಚಾರಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.