
ಕೇಂದ್ರ ಸಚಿವ ಸುರೇಶ್ ಗೋಪಿ ಹಾಗೂ ಕೇರಳ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ
ಕೃಪೆ: ಪಿಟಿಐ
ಇಡುಕ್ಕಿ/ತಿರುವನಂತಪುರ: ಕೇಂದ್ರ ಸಚಿವ ಸುರೇಶ್ ಗೋಪಿ ಅವರು ತಮ್ಮನ್ನುದ್ದೇಶಿಸಿ ನೀಡಿರುವ ಹೇಳಿಕೆಗೆ ಕೇರಳ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಇಡುಕ್ಕಿ ಜಿಲ್ಲೆಯ ವಟ್ಟವಾಡದಲ್ಲಿ ಗುರುವಾರ ನಡೆದ ಜನಸಂಪರ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೋಪಿ ಅವರನ್ನು, ತಮ್ಮ ಭಾಗದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗೋಪಿ, 'ಮುಂದಿನ ದಿನಗಳಲ್ಲಿ ಸುಶಿಕ್ಷತ ಶಿಕ್ಷಣ ಸಚಿವರು ಬರಲಿ' ಎಂದು ಹೇಳಿದ್ದಾರೆ.
ನೇರವಾಗಿ ಶಿವನ್‌ಕುಟ್ಟಿ ಅವರ ಹೆಸರನ್ನು ಉಲ್ಲೇಖಿಸದ ಕೇಂದ್ರ ಸಚಿವ, ತಮ್ಮನ್ನು ಆಗಾಗ್ಗೆ ಟೀಕಿಸುವ ಶಿಕ್ಷಣ ಸಚಿವರಿಂದ ಇಂತಹ ಸೌಕರ್ಯಗಳನ್ನು ನಿರೀಕ್ಷಿಸಬಾರದು ಎಂದಿದ್ದಾರೆ.
ಗೋಪಿ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಈ ಸಂಬಂಧ ಶಿವನ್‌ಕುಟ್ಟಿ ಅವರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸಚಿವರಿಂದ ರಾಜ್ಯಕ್ಕೆ ಒಂದು ಪಿನ್ನಿನಷ್ಟೂ ಉಪಯೋಗವಾಗಿಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.