ADVERTISEMENT

ಕೇರಳ | 2 ತಿಂಗಳುಗಳಲ್ಲಿ 9 ಆನೆಗಳ ಕಳೇಬರ ಪತ್ತೆ: ತನಿಖೆಗೆ ಸಮಿತಿ ರಚನೆ

ಅರ್ಜುನ್ ರಘುನಾಥ್
Published 3 ಸೆಪ್ಟೆಂಬರ್ 2025, 5:36 IST
Last Updated 3 ಸೆಪ್ಟೆಂಬರ್ 2025, 5:36 IST
<div class="paragraphs"><p>ರಸ್ತೆ ದಾಟುತ್ತಿರುವ ಕಾಡಾನೆಗಳ ಹಿಂಡು&nbsp;&nbsp;</p></div>

ರಸ್ತೆ ದಾಟುತ್ತಿರುವ ಕಾಡಾನೆಗಳ ಹಿಂಡು  

   

(ಪ್ರಾತಿನಿಧಿಕ ಚಿತ್ರ)

ತಿರುವನಂತಪುರ(ಕೇರಳ): ಕೊಚ್ಚಿಯ ಮಲಯತ್ತೂರು ಅರಣ್ಯ ವಿಭಾಗದ ನದಿಯಲ್ಲಿ ಆನೆಗಳ ಕಳೇಬರ ಪದೇ ಪದೇ ಪತ್ತೆಯಾಗುತ್ತಿದ್ದು, ಕಾರಣ ನಿಗೂಢವಾಗಿದೆ. ಕಳೆದ 2 ತಿಂಗಳುಗಳಲ್ಲಿ ಪೂಯಂಕುಟ್ಟಿ ನದಿಯಲ್ಲಿ 9 ಕಾಡಾನೆಗಳ ಕಳೇಬರ ಪತ್ತೆಯಾಗಿವೆ ಎಂದು ವರದಿಯಾಗಿದೆ.

ADVERTISEMENT

ಪ್ರಕರಣದ ತನಿಖೆಗಾಗಿ 11 ಸದಸ್ಯರ ಸಮಿತಿಯನ್ನು ರಚಿಸಿ ವನ್ಯಜೀವಿ ಮುಖ್ಯ ವಾರ್ಡನ್ (CWW) ಪ್ರಮೋದ್ ಜಿ. ಕೃಷ್ಣನ್ ಆದೇಶಿಸಿದ್ದಾರೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಕೆ. ವಿನೋದ್ ಕುಮಾರ್ ಸಮಿತಿಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಅರಣ್ಯ ಪ್ರದೇಶಗಳಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಆನೆಗಳ ಹಿಂಡು ಕೊಚ್ಚಿ ಹೋಗಿರಬಹುದು ಎಂಬುದು ಅರಣ್ಯ ಇಲಾಖೆಯ ಪ್ರಾಥಮಿಕ ಅಂದಾಜು. ಆದರೆ ಈ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ಮತ್ತು ಅತಿಕ್ರಮಣಗಳು ವ್ಯಾಪಕವಾಗಿ ನಡೆಯುತ್ತಿದ್ದು, ಈ ನಡುವೆ ಆನೆಗಳ ಸಾವು ಅನುಮಾನ ಮೂಡಿಸುವಂತಿದೆ ಎಂಬುವುದು ವನ್ಯಜೀವಿ ಕಾರ್ಯಕರ್ತರ ಆರೋಪ.

ಅರಣ್ಯದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆಯೇ ಅಥವಾ ಅರಣ್ಯ ಅಧಿಕಾರಿಗಳ ಕಡೆಯಿಂದ ಲೋಪಗಳಾಗಿವೆಯೇ ಎಂಬುವುದನ್ನು ಪರಿಶೀಲಿಸಲು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಕೆ ವಿನೋದ್ ಕುಮಾರ್ ನೇತೃತ್ವದ ತಂಡಕ್ಕೆ ನಿರ್ದೇಶಿಸಲಾಗಿದೆ.

ಹಠಾತ್ ಪ್ರವಾಹದಲ್ಲಿ ಆನೆಗಳ ಹಿಂಡು ಕೊಚ್ಚಿ ಹೋಗಿವೆ ಎಂಬುದು ಪ್ರಾಥಮಿಕ ಅಂದಾಜಾದರೂ, ತನಿಖೆಯ ವೇಳೆ ಎಲ್ಲಾ ಅಂಶಗಳನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರಮೋದ್ ತಿಳಿಸಿದ್ದಾರೆ.

ವನ್ಯಜೀವಿ ಕಾರ್ಯಕರ್ತ ಎಂ.ಎನ್. ಜಯಚಂದ್ರನ್ ಮಾತನಾಡಿ, ಪ್ರವಾಹದಲ್ಲಿ ಕಾಡು ಆನೆಗಳು ಕೊಚ್ಚಿ ಹೋಗಿವೆ ಎಂದು ನಂಬುವುದು ಕಷ್ಟ. ಕಾಡಾನೆಗಳ ಸಾವು ನಿಗೂಢವಾಗಿದ್ದು, ಸತ್ಯ ಹೊರಬರಲು ನ್ಯಾಯಯುತ ತನಿಖೆ ಅತ್ಯಗತ್ಯ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.