ADVERTISEMENT

ಕೇರಳದ ಮೊದಲ 3D ಮುದ್ರಿತ ಕಟ್ಟಡ ಲೋಕಾರ್ಪಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2023, 4:19 IST
Last Updated 11 ಅಕ್ಟೋಬರ್ 2023, 4:19 IST
   

ತಿರುವನಂತಪುರ: ಕೇರಳದ ಮೊದಲ 3ಡಿ-ಮುದ್ರಿತ ಕಟ್ಟಡ ‘ಅಮೇಜ್‌ 28’ ತಿರುವನಂತಪುರದ ಪಿಟಿಆರ್ ನಗರದ ನಿರ್ಮಿತಿ ಕೇಂದ್ರದ ಆವಣರಣದಲ್ಲಿ ನಿರ್ಮಿಸಲಾಗಿದೆ.

ಈ ಕಟ್ಟಡ ನಿರ್ಮಿಸಲು ಕೇವಲ 28 ದಿನಗಳನ್ನು ತೆಗೆದುಕೊಳ್ಳಲಾಗಿದೆ. ಚೆನೈ ಮೂಲದ ಕಟ್ಟಡ ನಿರ್ಮಾಣ ಸಂಸ್ಥೆ ‘ತ್ವಾಸ್ತ’ ಈ ಕಟ್ಟಡವನ್ನು ನಿರ್ಮಾಣದ ಜವಾಬ್ದಾರಿಯನ್ನು ತೆಗೆದುಕೊಂಡಿತ್ತು. ಮಂಗಳವಾರ ಈ ಕಟ್ಟಡದ ಉದ್ಘಾಟನೆ ಮಾಡಲಾಗಿದೆ.

‘ಸಾಮಾನ್ಯ ಕಟ್ಟಡಗಳಿಗಿಂತ ಈ ರೀತಿಯ ಕಟ್ಟಡಗಳನ್ನು ತ್ವರಿತವಾಗಿ ನಿರ್ಮಾಣ ಮಾಡಬಹುದು. ಇದರಲ್ಲಿ ವೇಸ್ಟೇಜ್‌ ಕಡಿಮೆ. ಸಭಾಂಗಣ ನಿರ್ಮಾಣಕ್ಕೆ ಹೆಚ್ಚು ಸಮಯ ತೆಗೆದುಕೊಂಡಿದ್ದು, 3D ವಾಲ್ ಪ್ರಿಂಟಿಂಗ್ ಪೂರ್ಣಗೊಳಿಸಲು ಕೇವಲ 2 ದಿನಗಳನ್ನು ತೆಗೆದುಕೊಂಡಿದ್ದೇವೆ’ ಎಂದು ಕಂಪೆನಿ ಮುಖ್ಯಸ್ಥ ಪ್ರವೀಣ್‌ ನಾಯರ್ ಹೇಳಿದ್ದಾರೆ.

ADVERTISEMENT

‘ಇದೊಂದು ಪ್ರಯೋಗಾತ್ಮಕ ಯೋಜನೆಯಾಗಿದ್ದು, 380 ಚದರ ಅಡಿಯ ಈ ಕಟ್ಟಡ ನಿರ್ಮಿಸಲು ಸುಮಾರು ₹11 ವೆಚ್ಚವಾಗಿದೆ’ ಎಂದು ತಿಳಿಸಿದರು.

ಓದಿ: 3D Printed Post Office: ದೇಶದ ಮೊದಲ 3D ಮುದ್ರಿತ ಅಂಚೆ ಕಚೇರಿ ಕಟ್ಟಡ ಉದ್ಘಾಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.