ADVERTISEMENT

ಕೇರಳದ ಮಾಜಿ ಸ್ಪೀಕರ್‌ ವಕ್ಕಂ ಪುರುಷೋತ್ತಮನ್ ನಿಧನ

ಪಿಟಿಐ
Published 31 ಜುಲೈ 2023, 11:43 IST
Last Updated 31 ಜುಲೈ 2023, 11:43 IST
ವಕ್ಕಂ ಪುರುಷೋತ್ತಮನ್
ವಕ್ಕಂ ಪುರುಷೋತ್ತಮನ್   

ತಿರುವನಂತಪುರ: ಹಿರಿಯ ಕಾಂಗ್ರೆಸ್‌ ನಾಯಕ, ಕೇರಳದ ಮಾಜಿ ಸ್ಪೀಕರ್‌ ವಕ್ಕಂ ಪುರುಷೋತ್ತಮನ್ (96) ಅವರು ಕಿಮ್ಸ್‌ ಆಸ್ಪತ್ರೆಯಲ್ಲಿ ಇಂದು (ಸೋಮವಾರ) ನಿಧನರಾಗಿದ್ದಾರೆ.

ಅವರು ಮಿಜೋರಾಂನ ರಾಜ್ಯಪಾಲರಾಗಿ ಹಾಗೂ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದ ಲೆಫ್ಟಿನಂಟ್‌ ಗವರ್ನರ್‌ ಆಗಿಯೂ ಸೇವೆ ಸಲ್ಲಿಸಿದ್ದರು.

ಕೇರಳ ಸರ್ಕಾರದಲ್ಲಿ 1971–1977ರವರೆಗೆ, 1980 ರಿಂದ 1981ರವರೆಗೆ ಹಾಗೂ 2004 ರಿಂದ 2006ರವರೆಗೆ ಸಂಪುಟ ಸಚಿವರಾಗಿದ್ದರು.

ADVERTISEMENT

1982– 1984 ರವರೆಗೆ ಹಾಗೂ 2001–2004ರವರೆಗೆ ಕೇರಳ ವಿಧಾನಸಭಾ ಸ್ಪೀಕರ್ ಆಗಿದ್ದರು. 

ಪುರುಷೋತ್ತಮನ್‌  ನಿಧನಕ್ಕೆ ಕೇರಳ ವಿಧಾನಸಭಾ ಸ್ಪೀಕರ್‌ ಎ.ಎನ್‌ ಶಮ್ಸೀರ್‌, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೇರಿದಂತೆ ವಿರೋಧಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.