ADVERTISEMENT

ಕೇರಳ ಚಿನ್ನ ಕಳ್ಳಸಾಗಾಣೆ: ಶಿವಶಂಕರ್‌ ವಿರುದ್ಧ ‘ಚಾರ್ಜ್‌ಶೀಟ್‌’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 15:54 IST
Last Updated 24 ಡಿಸೆಂಬರ್ 2020, 15:54 IST
ಎಂ.ಶಿವಶಂಕರ್‌
ಎಂ.ಶಿವಶಂಕರ್‌   

ತಿರುವನಂತಪುರ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಮಾಜಿ ಮುಖ್ಯ ಕಾರ್ಯದರ್ಶಿ ಎಂ.ಶಿವಶಂಕರ್‌ ವಿರುದ್ಧ ಗುರುವಾರ ಆರೋಪ ಪಟ್ಟಿ ಸಲ್ಲಿಸಿದೆ.

ಈ ಪ್ರಕರಣದಡಿಯಲ್ಲಿ ಅವರ ಆಸ್ತಿ ಜಪ್ತಿ ಮಾಡುವ ಸಾಧ್ಯತೆಯೂ ಇದೆ.

‘ಕಳ್ಳಸಾಗಾಣೆ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದ ಶಿವಶಂಕರ್‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ (ಯುಎಇ) ಏಜೆನ್ಸಿಯೊಂದರಿಂದ ಕಮಿಷನ್‌ ಪಡೆದಿದ್ದಾರೆ ಎಂದು ಇ.ಡಿ.ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಚಿನ್ನ ಕಳ್ಳಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಿಂದ ₹1.8 ಕೋಟಿ ವಶಪಡಿಸಿಕೊಳ್ಳಲಾಗಿದ್ದು, ಇದು ಶಿವಶಂಕರ್‌ ಅವರಿಗೆ ನೀಡಬೇಕಿದ್ದ ಕಮಿಷನ್‌ ಮೊತ್ತವಿರಬಹುದು ಎಂದು ಇ.ಡಿ ಅನುಮಾನ ವ್ಯಕ್ತಪಡಿಸಿದೆ’ ಎಂದೂ ಮೂಲಗಳು ಹೇಳಿವೆ.

ಇ.ಡಿ.ಪ್ರಕರಣದಲ್ಲಿ ಶಿವಶಂಕರ್‌ಗೆ ಜಾಮೀನು ಸಿಗುವುದು ಕಷ್ಟವಾಗಬಹುದು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.