ADVERTISEMENT

ಡೀಮ್ಡ್‌ ವಿ.ವಿ ಕುಲಾಧಿಪತಿ ಸ್ಥಾನದಿಂದ ರಾಜ್ಯಪಾಲರ ಪದಚ್ಯುತಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 19:30 IST
Last Updated 10 ನವೆಂಬರ್ 2022, 19:30 IST

ತಿರುವನಂತಪುರ: ಕೇರಳದ ಸಂಸ್ಕೃತಿ ವ್ಯವಹಾರ ಇಲಾಖೆಯ ಅಧೀನದಲ್ಲಿ ಬರುವ ಕೇರಳ ಕಲಾಮಂಡಲಂ ಡೀಮ್ಡ್‌ ವಿ.ವಿಯ ಕುಲಾಧಿಪತಿ ಸ್ಥಾನದಿಂದ ರಾಜ್ಯಪಾಲರನ್ನು ಪದಚ್ಯುತಿಗೊಳಿಸಿ ಸರ್ಕಾರ ಗುರುವಾರ ನಿರ್ಧಾರ ಕೈಗೊಂಡಿದೆ.

ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಣಿ ಜಾರ್ಜ್‌ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಕಲೆ ಮತ್ತು ಸಂಸ್ಕೃತಿ ಕ್ಷೇತ್ರದ ಪ್ರಮುಖ ಸಾಧಕರೊಬ್ಬರನ್ನು ಕುಲಾಧಿಪತಿಯಾಗಿ ನೇಮಿಸುವ ಸಂಬಂಧ ನಿಯಮಗಳಿಗೂ ತಿದ್ದುಪಡಿ ತರಲಾಗಿದೆ.

ಇದು, ಡೀಮ್ಡ್‌ ವಿಶ್ವವಿದ್ಯಾಲಯ ಆಗಿರುವುದರಿಂದ ಈ ನಿರ್ಧಾರಕ್ಕೆ ರಾಜ್ಯಪಾಲರ ಅನುಮೋದನೆ ಅನಗತ್ಯ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.