ADVERTISEMENT

ಕುಲಾಧಿಪತಿಯಾಗಿ ಶಿಕ್ಷಣ ತಜ್ಞರು: ಕರಡು ಮಸೂದೆಗೆ ಒಪ್ಪಿಗೆ

ಪಿಟಿಐ
Published 30 ನವೆಂಬರ್ 2022, 14:06 IST
Last Updated 30 ನವೆಂಬರ್ 2022, 14:06 IST

ತಿರುವನಂತಪುರ (ಪಿಟಿಐ): ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರ ಬದಲು ಉತ್ತಮ ಶಿಕ್ಷಣತಜ್ಞರನ್ನು ಕುಲಾಧಿಪತಿಯನ್ನಾಗಿ ನೇಮಿಸುವ ಮಸೂದೆಯನ್ನು ಡಿ.5ರಿಂದ ಪ್ರಾರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲು ಕೇರಳ ಸರ್ಕಾರ ಬುಧವಾರ ನಿರ್ಧಾರಿಸಿದೆ.

ಕುಲಪತಿಗಳ ನೇಮಕ ಕುರಿತು ರಾಜ್ಯದಲ್ಲಾಗುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಮಾಡಿದೆ. ಮುಖ್ಯಮಂತ್ರಿ ಪಿಣರಾಯಿ ರಾಜನ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಶಿಕ್ಷಣತಜ್ಞರನ್ನು ನೇಮಿಸುವ ಕರಡು ಮಸೂದೆಗೆ ಒಪ್ಪಿಗೆ ದೊರಕಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT