ADVERTISEMENT

ವಿದ್ಯಾರ್ಥಿ ಚಳವಳಿ ನಿಷೇಧ ಕೇರಳ ಸರ್ಕಾರ ವಿರೋಧ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 19:33 IST
Last Updated 27 ಫೆಬ್ರುವರಿ 2020, 19:33 IST

ತಿರುವನಂತಪುರ: ಶಾಲಾ–ಕಾಲೇಜುಗಳಲ್ಲಿ ನಡೆಸುವ ಎಲ್ಲಾ ಚಳವಳಿಗಳಿಗೆ ಕೇರಳದ ನ್ಯಾಯಾಲಯ ನಿಷೇಧ ಹೇರಿರುವುದನ್ನು ಕೇರಳದ ಎಡಪಂಥೀಯ ಸರ್ಕಾರ ವಿರೋಧಿಸಿದೆ.

ನ್ಯಾಯಾಲಯದ ಆದೇಶವನ್ನು ಪರಿಶೀಲಿಸಿದ ನಂತರ ಅದರ ವಿರುದ್ಧ ರಾಜ್ಯ ಸರ್ಕಾರಮೇಲ್ಮನವಿ ಸಲ್ಲಿಸಲಿದೆ ಎಂದು ಕೇರಳದ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ಹೇಳಿದ್ದಾರೆ.

‘ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಸಂಬಂಧಿತ ಚಟುವಟಿಕೆಗಳಿಗೆ ಇವೆಯೇ ಹೊರತು ಪ್ರತಿಭಟನೆಗಳಿಗೆ ಅಲ್ಲ’ ಎಂದು ಉಲ್ಲೇಖಿಸಿದ ನ್ಯಾಯಾಲಯ ಚಳವಳಿಗಳನ್ನು ನಿಷೇಧಿಸಿತು. ‘ಇತರ ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಹಕ್ಕು ಯಾರಿಗೂ ಇಲ್ಲ’ ಎಂದೂ ನ್ಯಾಯಾಲಯ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.