ತಿರುವನಂತಪುರಂ : ಕೇರಳದ ವಿವಿಧ ಕಡೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಧ್ಯ ಹಾಗೂ ಉತ್ತರ ಭಾಗದ ಜಿಲ್ಲೆಗಳಲ್ಲಿನ ನದಿಗಳು ಮತ್ತು ಅಣೆಕಟ್ಟೆಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ. ಹಲವು ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪತ್ತನಂತಿಟ್ಟ ಮತ್ತು ಪಾಲಕ್ಕಾಡ್ ಜಿಲ್ಲೆಗಳ ಇಡುಕ್ಕಿ, ತ್ರಿಶೂರ್, ವಯನಾಡ್‌ನ ಅಣೆಕಟ್ಟುಗಳು ಪೂರ್ಣ ಭರ್ತಿಯಾಗಿವೆ, ನೀರಿನ ಒಳ ಹರಿವು ಅಧಿಕವಾಗಿದ್ದು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಾಲಕ್ಕಾಡ್ ಜಿಲ್ಲೆಯ ಮೀನಕಾರ, ವಲಯಾರ್ ಮತ್ತು ಸಿರುವಾನಿ ಅಣೆಕಟ್ಟುಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಮೂಲಥರ ಅಣೆಕಟ್ಟೆಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ಒಳಹರಿವನ್ನು ನಿಯಂತ್ರಿಸಲು ಎಲ್ಲಾ ಗೇಟುಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪತ್ತನಂತಿಟ್ಟದ ಅಚನ್‌ಕೋವಿಲ್ ಮತ್ತು ತ್ರಿಶೂರ್‌ನ ಕರುವನ್ನೂರ್ ನದಿಗಳಲ್ಲಿ ಹೆಚ್ಚು ನೀರು ಹರಿದು ಬರುತ್ತಿದೆ. ನದಿಗಳ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಯೆಲ್ಲೋ ಆಲರ್ಟ್ ಘೋಷಿಸಲಾಗಿದೆ ಎಂದು ನೀರಾವರಿ ವಿನ್ಯಾಸ ಮತ್ತು ಸಂಶೋಧನಾ ಮಂಡಳಿ ಹಾಗೂ ಕೇಂದ್ರ ಜಲ ಆಯೋಗ ಹೇಳಿದೆ.
ಭಾರತೀಯ ಹವಮಾನ ಇಲಾಖೆಯು ಕೇರಳದ ಉತ್ತರ ಭಾಗದ ಜಿಲ್ಲೆಗಳಾದ ವಯನಾಡು, ಕಣ್ಣುದಿರ್ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್ ಘೋಷಿಸಿದೆ. ಜೊತೆಗೆ ಇತರೆ ಆರು ಜಿಲ್ಲೆಗಳಿಗೆ ಯೆಲ್ಲೋ ಆಲರ್ಟ್ ನೀಡಿದೆ.
ಆರೆಂಜ್ ಆಲರ್ಟ್ 11 ಸೆಂ.ಮೀ ನಿಂದ 20 ಸೆಂ.ಮೀ
ಯೆಲ್ಲೋ ಆಲರ್ಟ್ 6 ಸೆಂ.ಮೀ ನಿಂದ 11 ಸೆಂ.ಮೀ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.