ADVERTISEMENT

ಕಸ್ಟಡಿಯಲ್ಲಿ ಯುವಕನ ಸಾವು: ಮಾಜಿ ಪೊಲೀಸ್ ಅಧಿಕಾರಿಗಳನ್ನು ನಿರ್ದೋಷಿಗಳೆಂದ HC

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 8:10 IST
Last Updated 28 ಆಗಸ್ಟ್ 2025, 8:10 IST
<div class="paragraphs"><p>ಚಿತ್ರ ಕೃಪೆ: ‍ಪ್ರಾತಿನಿಧಕ ಚಿತ್ರ</p></div>

ಚಿತ್ರ ಕೃಪೆ: ‍ಪ್ರಾತಿನಿಧಕ ಚಿತ್ರ

   

ಕೊಚ್ಚಿ: 2005ರಲ್ಲಿ ಕಸ್ಟಡಿಯಲ್ಲಿದ್ದ ಯುವಕನ ಸಾವಿಗೆ ಸಂಬಂಧಿಸಿದಂತೆ ಶಿಕ್ಷೆಗೆ ಒಳಗಾಗಿದ್ದ ನಾಲ್ವರು ಮಾಜಿ ಪೊಲೀಸ್ ಅಧಿಕಾರಿಗಳನ್ನು ರ್ದೋಷಿಗಳೆಂದು ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.

ಘಟನೆ ಹಿನ್ನಲೆ

ADVERTISEMENT

2005ರ ಸೆಪ್ಟೆಂಬರ್ 27ರಂದು ತಿರುವನಂತಪುರಂನ ಉದಯಕುಮಾರ್ (28) ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದರು. ನಂತರ ಫೋರ್ಟ್ ಪೊಲೀಸ್ ಠಾಣೆಗೆ ಕರೆದೊಯ್ದು, ಅವನಿಗೆ ಹಿಂಸೆ ನೀಡಿ ಸಾಯಿಸಿದ್ದಾರೆಂದು ಆರೋಪಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಆದರೆ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆಯ ಸಮಯದಲ್ಲಿ ಒಬ್ಬರು ಮೃತರಾದರು. ಮರಣದಂಡನೆಗೆ ಗುರಿಯಾದ ಇನ್ನೊಬ್ಬರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಬಾಕಿ ಇರುವಾಗ ನಿಧನರಾದರು. ಉಳಿದ ನಾಲ್ವರು ಮಾಜಿ ಪೊಲೀಸ್ ಅಧಿಕಾರಿಗಳು ಶಿಕ್ಷೆ ಅನುಭವಿಸುತ್ತಿದ್ದರು.

2018 ರಲ್ಲಿ ಸೆಷನ್ಸ್ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ನಾಲ್ವರು ಮಾಜಿ ಪೊಲೀಸ್ ಅಧಿಕಾರಿಗಳನ್ನು ನ್ಯಾಯಮೂರ್ತಿಗಳಾದ ರಾಜ ವಿಜಯರಾಘವನ್‌ ಮತ್ತು ಕೆ.ವಿ. ಜಯಕುಮಾರ್ ರವನ್ನೊಳಗೊಂಡ ವಿಭಾಗೀಯ ಪೀಠವು, ಸಿಬಿಐ ನಡೆಸಿದ ತನಿಖೆಯು ದೋಷದಿಂದ ಕೂಡಿದ್ದು, ಈಗಾಗಲೇ ಶಿಕ್ಷೆಗೆ ಗುರಿಯಾಗಿರುವವರ ವಿರುದ್ಧ ಸಾಕಷ್ಟು ಸಾಕ್ಷಿಗಳು ಲಭ್ಯವಾಗದ ಕಾರಣ ನಿರ್ದೋಷಿಗಳು ಎಂದು ಘೋಷಿಸಲಾಗಿದೆ ಎಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.