ADVERTISEMENT

ಕೇರಳ | ಸುನ್ನತಿ: ಅರಿವಳಿಕೆಯಿಂದ 2 ತಿಂಗಳ ಮಗು ಸಾವು

ಪಿಟಿಐ
Published 7 ಜುಲೈ 2025, 15:32 IST
Last Updated 7 ಜುಲೈ 2025, 15:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತಿರುವನಂತಪುರ: ಮುಸ್ಲಿಮರ ಧಾರ್ಮಿಕ ಪದ್ಧತಿಯಂತೆ ಸುನ್ನತಿ ಮಾಡುವ ವೇಳೆ 2 ತಿಂಗಳ ಮಗು ಸಾವಿಗೀಡಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. 

‘ಕೋಯಿಕ್ಕೋಡ್‌ ಜಿಲ್ಲೆಯ ಕಕ್ಕೂರ್‌ನಲ್ಲಿ ಸುನ್ನತಿ ಮಾಡಲೆಂದು ಅರಿವಳಿಕೆ ನೀಡಿದ ಬಳಿಕ ಅಸ್ವಸ್ಥಗೊಂಡು ಮಗು ಅಸುನೀಗಿದೆ. ರಾಜ್ಯದ ಮುಸ್ಲಿಂ ಸಮುದಾಯದಲ್ಲಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಸುನ್ನತಿ ಮಾಡುವುದು ಸಾಮಾನ್ಯವಾಗಿದೆ’ ಎಂದು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ವಿ ಮನೋಜ್‌ ಕುಮಾರ್‌ ತಿಳಿಸಿದರು. 

‘ಮಕ್ಕಳಿಗೆ ನೋವುಂಟುಮಾಡುವ ಧಾರ್ಮಿಕ ಆಚರಣೆಗಳನ್ನು ಕಾನೂನಿನ ಮೂಲಕ ನಿಯಂತ್ರಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದರು.

ADVERTISEMENT

‘ಜನನ‌ವಾದ ಎರಡನೇ ವಾರದಲ್ಲಿಯೇ ಮಗುವಿಗೆ ಸುನ್ನತಿ ಮಾಡಿಸಲು ಪೋಷಕರು ಮುಂದಾಗುತ್ತಿದ್ದಾರೆ. ಇದರಿಂದ ಹೆಚ್ಚಿನ ಅಪಾಯವೇನೂ ಇಲ್ಲ’ ಎಂದು ತಿರುವಂತಪುರದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.