ADVERTISEMENT

ಕೇರಳ: ಇಂಗ್ಲಿಷ್‌ ಕಲಿಕೆಗೆ ‘ಇ3 ಯೋಜನೆ’

ಪಿಟಿಐ
Published 24 ಫೆಬ್ರುವರಿ 2020, 19:45 IST
Last Updated 24 ಫೆಬ್ರುವರಿ 2020, 19:45 IST

ತಿರುವನಂತಪುರ: ವಿದ್ಯಾರ್ಥಿಗಳ ಇಂಗ್ಲಿಷ್‌ ಭಾಷಾ ಪ್ರಾವೀಣ್ಯತೆ ಹೆಚ್ಚಿಸುವ ಉದ್ದೇಶದಿಂದ ಕೇರಳ ಶೈಕ್ಷಣಿಕ ಮೂಲಸೌಕರ್ಯ ಮತ್ತು ತಂತ್ರಜ್ಞಾನ(ಕೆಐಟಿಇ) ಸಂಸ್ಥೆಯು ಶಾಲೆಗಳಲ್ಲಿ ಇ3 ಯೋಜನೆಯನ್ನು ಜಾರಿಗೊಳಿಸಿದೆ.

‘ಈ ಮಹತ್ವಾಕಾಂಕ್ಷೆಯ ಯೋಜನೆ ಅಡಿಯಲ್ಲಿ ಎಲ್ಲಾ ಶಿಕ್ಷಕರಿಗೂ ತರಬೇತಿ ನೀಡಲಾಗುವುದು’ ಎಂದು ಕೇರಳ ಶಿಕ್ಷಣ ಸಚಿವ ಸಿ. ರವೀಂದ್ರನಾಥ್‌ ಹೇಳಿದ್ದಾರೆ.

‘ಶಾಲೆಗಳಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಆಹ್ಲಾದಕರ ವಾತಾವರಣದಲ್ಲಿ ವಿದ್ಯಾರ್ಥಿಗಳ ಇಂಗ್ಲಿಷ್‌ ಕಲಿಕೆಯನ್ನು ಸುಧಾರಿಸುವುದು ಈ ಯೋಜನೆಯ ಉದ್ದೇಶ’ ಎಂದು ಕೆಐಟಿಇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ವರ್‌ ಸಾದತ್‌ ತಿಳಿಸಿದ್ದಾರೆ.

ADVERTISEMENT

ಈ ಯೋಜನೆಯು ಸಮಗ್ರ ಇ–ಗ್ರಂಥಾಲಯ, ಇ– ಭಾಷಾ ಪ್ರಯೋಗಾಲಯ ಮತ್ತು ಇ–ಪ್ರಸಾರಗಳೆಂಬಮೂರು ಘಟಕಗಳನ್ನು ಹೊಂದಿದೆ ಎಂದಿದ್ದಾರೆ.

ಈಗಾಗಲೇ 200 ರಷ್ಟು ಡಿಜಿಟಲ್‌ ರೂಪದ ಕಥಾ ಪುಸ್ತಕಗಳನ್ನು ಇ–ಗ್ರಂಥಾಲಯಕ್ಕೆ ಅಪ್‌ಲೋಡ್‌ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಇಂಗ್ಲಿಷ್‌ ಭಾಷೆ, ವ್ಯಾಕರಣಗಳ ಬಗ್ಗೆ ಮಾಹಿತಿ ನೀಡುವ ತಂತ್ರಾಂಶಗಳು ಕೂಡ ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.