ADVERTISEMENT

ಚೆಕ್‌ ಅಮಾನ್ಯ: ತುಷಾರ್‌ ವಿರುದ್ಧದ ಪ್ರಕರಣ ವಜಾ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 20:15 IST
Last Updated 8 ಸೆಪ್ಟೆಂಬರ್ 2019, 20:15 IST
ತುಷಾರ್‌ ವೆಳ್ಳಾಪಳ್ಳಿ
ತುಷಾರ್‌ ವೆಳ್ಳಾಪಳ್ಳಿ   

ತಿರುವನಂತಪುರ: ಕೇರಳದ ಎನ್‌ಡಿಎ ಮುಖಂಡ ತುಷಾರ್‌ ವೆಳ್ಳಾಪಳ್ಳಿ ವಿರುದ್ಧದ ಚೆಕ್‌ ಅಮಾನ್ಯ ಪ್ರಕರಣವನ್ನು ಯುನೈಟೆಡ್‌ ಅರಬ್‌ ಎಮಿರೆಟ್ಸ್‌ನ (ಯುಎಇ) ನ್ಯಾಯಾಲಯ ವಜಾಗೊಳಿಸಿದೆ.

ಭಾರತ್‌ ಧರ್ಮ ಜನ ಸೇನಾ (ಬಿಡಿಜೆಎಸ್) ಪಕ್ಷದ ಅಧ್ಯಕ್ಷರಾಗಿರುವ ತುಷಾರ್‌ ಅವರ ಪಾಸ್‌ಪೋರ್ಟ್‌ ಅನ್ನು ಅಜ್ಮಾನ್‌ನ ನ್ಯಾಯಾಲಯವು ಹಿಂದಿರುಗಿಸಿದೆ.

ಸಾಕ್ಷ್ಯಾಧಾರಗಳ ವಿಶ್ವಾಸಾರ್ಹತೆ ಕೊರತೆಯಿಂದ ನ್ಯಾಯಾಲಯ ಈ ಪ್ರಕರಣವನ್ನು ವಜಾಗೊಳಿಸಿದೆ.

ADVERTISEMENT

ಆಗಸ್ಟ್‌ 22 ರಂದು ತುಷಾರ್‌ ಅವರನ್ನು ಅಜ್ಮಾನ್‌ನ ಪೊಲೀಸರು ಬಂಧಿಸಿದ್ದರು. ₹20 ಕೋಟಿಯ ಚೆಕ್‌ ನೀಡಿ ವಂಚಿಸಲಾಗಿದೆ ಎಂದು ಆರೋಪಿಸಿ ಕೇರಳ ಸಂಜಾತ ನಾಜಿಲ್ ಅಬ್ದುಲ್ಲಾ ಅವರು ತುಷಾರ್‌ ವಿರುದ್ಧ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.