
ಪಿಟಿಐಭಯೋತ್ಪಾದನೆ ಉಗ್ರವಾದ (ಸಾಂದರ್ಭಿಕ ಚಿತ್ರ)
ತಿರುವನಂತಪುರ: ಮತೀಯವಾದದ ವಿಡಿಯೊ ತೋರಿಸಿ ಭಯೋತ್ಪಾದಕನಾಗುವಂತೆ ತಾಯಿ ಹಾಗೂ ಮಲ ತಂದೆ ಪೀಡಿಸುತ್ತಿದ್ದಾರೆ ಎಂದು 16 ವರ್ಷದ ಬಾಲಕ ನೀಡಿರುವ ದೂರನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಕುಟುಂಬವು ಬ್ರಿಟನ್‌ನಲ್ಲಿದ್ದ ಸಂದರ್ಭದಲ್ಲಿ ಮತೀಯವಾದದ ವಿಷಯವುಳ್ಳ ವಿಡಿಯೊಗಳನ್ನು ತನಗೆ ತೋರಿಸಲಾಗುತ್ತಿತ್ತು ಎಂದು ಬಾಲಕ ತನ್ನ ದೂರಿನಲ್ಲಿ ಹೇಳಿದ್ದಾನೆ.
‘ಬಾಲಕನ ದೂರನ್ನು ಮೊದಲಿಗೆ ಪರಿಶೀಲಿಸುತ್ತಿದ್ದೇವೆ. ಅದರ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.