ಗೋವಿಂದಚಾಮಿ
ಕಣ್ಣೂರು: ಭಾರಿ ಸಂಚಲನ ಮೂಡಿಸಿದ್ದ 2011ರ ಕೇರಳದ ಸೌಮ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ದೋಷಿ ಗೊವಿಂದಚಾಮಿ ಭಾರಿ ಭದ್ರತೆ ಇರುವ ಕಣ್ಣೂರು ಕೇಂದ್ರ ಜೈಲಿನಿಂದ ಶುಕ್ರವಾರ ಬೆಳಿಗ್ಗೆ ತಪ್ಪಿಸಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಗೋವಿಂದಚಾಮಿಗೆ ಎಡಗೈ ತುಂಡಾಗಿದ್ದು, ಕಣ್ಣೂರು ನಗರ ವ್ಯಾಪ್ತಿಯ ಥಲಾಪ್‌ನಲ್ಲಿರುವ ಪಾಳುಬಿದ್ದ ಕಟ್ಟಡದ ಸಮೀಪ ಆತನನ್ನು ಸೆರೆಹಿಡಿಯಲಾಗಿದೆ.
ವರದಿಗಳ ಪ್ರಕಾರ ಆತ ಕಟ್ಟಡದ ಸಮೀಪ ಇದ್ದ ಬಾವಿಯಲ್ಲಿ ಅಡಗಿ ಕುಳಿತಿದ್ದ.
2011ರ ಫೆಬ್ರುವರಿ 1 ರಂದು ಎರ್ನಾಕುಳಂನಿಂದ ಶೊರ್ನೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ, ಶೊರ್ನೂರು ಸಮೀಪದ ಮಂಜಕ್ಕಾಡ್ ನಿವಾಸಿ 23 ವರ್ಷದ ಸೌಮ್ಯ ಮೇಲೆ ಗೋವಿಂದಚಾಮಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ.
ಪ್ರಕರಣದಲ್ಲಿ ಗೋವಿಂದಚಾಮಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ದೇಶದಾದ್ಯಂತ ಸುದ್ದಿ ಮಾಡಿದ್ದ ಈ ಪ್ರಕರಣ, ಸಾರ್ವಜನಿಕ ಸಾರಿಗೆಗಳಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.