ತಿರುವನಂತಪುರ: ಕೇರಳದ ಪಾಲಕ್ಕಾಡ್ ಜಿಲ್ಲೆಯ ಶಾಲೆಯೊಂದರಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದು, ಆತಂಕ ಮತ್ತು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ನಿರ್ವಹಿಸುತ್ತಿರುವ ವ್ಯಾಸ ವಿದ್ಯಾಪೀಠ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸಂಜೆ ಸ್ಫೋಟ ಸಂಭವಿಸಿದೆ. ಒಬ್ಬ ವಿದ್ಯಾರ್ಥಿ ಮತ್ತು ಮಹಿಳೆಗೆ ಗಾಯಗಳಾಗಿವೆ.
ಶಾಲಾ ಆವರಣದಲ್ಲಿ ಪತ್ತೆಯಾದ ವಸ್ತು ಬಾಂಬ್ ಎಂದು ತಿಳಿಯದೇ ವಿದ್ಯಾರ್ಥಿಯು ಅದನ್ನು ಎಸೆದಿದ್ದರು. ಈ ವೇಳೆ ಆ ವಸ್ತು ಸ್ಫೋಟಗೊಂಡಿದೆ. ಕಾಡುಹಂದಿಗಳನ್ನು ಹಿಡಿಯಲು ಈ ಬಾಂಬ್ ಅನ್ನು ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
‘ಚುನಾವಣೆಯ ಕಾರಣಕ್ಕೆ ರಾಜ್ಯದಲ್ಲಿ ಹಿಂಸಾಚಾರವನ್ನು ಸೃಷ್ಟಿಸಲು ಶಾಲೆಯಲ್ಲಿ ಬಾಂಬ್ ಇರಿಸಲಾಗಿತ್ತು. ಶಾಲೆಯನ್ನು ಆರ್‌ಎಸ್‌ಎಸ್ ತರಬೇತಿ ಕೇಂದ್ರಗಳಾಗಿ ಬಳಸಲಾಗುತ್ತಿದೆ. ಆರ್‌ಎಸ್‌ಎಸ್‌ನ ಎಲ್ಲ ಶಾಖೆಗಳಲ್ಲಿ ಶೋಧ ನಡೆಸಬೇಕು’ ಎಂದು ಸಿಪಿಎಂ, ಕಾಂಗ್ರೆಸ್ ಮತ್ತು ಡಿವೈಎಫ್ ಆಗ್ರಹಿಸಿವೆ.
‘ಸ್ಫೋಟದ ಹಿಂದೆ ಪಿತೂರಿ ನಡೆದಿದೆ’ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಆರೋಪಿಸಿವೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶಿಕ್ಷಣ ಇಲಾಖೆಯು ತನಿಖೆ ಆರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.