ADVERTISEMENT

ಕೇರಳ:‌ ಹೆಚ್ಚುತ್ತಿರುವ ಕೋವಿಡ್‌, ತಲೆನೋವಾಗಿರುವ ಝೀಕಾ

ಪಿಟಿಐ
Published 11 ಜುಲೈ 2021, 8:24 IST
Last Updated 11 ಜುಲೈ 2021, 8:24 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

‌ತಿರುವನಂತಪುರ: ಕೇರಳದಲ್ಲಿ ಇತ್ತೀಚೆಗೆ ಕೋವಿಡ್‌ ಮತ್ತು ಝೀಕಾ ವೈರಸ್‌ ಪ್ರಕರಣಗಳು ಹೆಚ್ಚುತ್ತಿರುವುದು ಆರೋಗ್ಯ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.

ಕಳೆದ ವರ್ಷ ಕೋವಿಡ್‌ ಪಿಡುಗನ್ನು ಸಮರ್ಪಕವಾಗಿ ಎದುರಿಸಿದ್ದ ಕೇರಳ ರಾಷ್ಟ್ರದಾದ್ಯಂತ ಪ್ರಶಂಸೆ ಗಿಟ್ಟಿಸಿತ್ತು. ‘ಕೇರಳ ಮಾದರಿ’ ಅಳವಡಿಕೆ ಕುರಿತು ಚರ್ಚೆಗಳು ಆಗಿದ್ದವು.

ಆದರೆ, ಇದೀಗ ಕೇರಳದಲ್ಲಿ ನಿತ್ಯ ಹೊಸದಾಗಿ 12,000ದಿಂದ 15,000 ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿರುವುದು ಆರೋಗ್ಯ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ.

ADVERTISEMENT

ಕೇರಳದಲ್ಲಿ ಶನಿವಾರ ಕೋವಿಡ್‌ನ 14,087 ಹೊಸ ಪ್ರಕರಣಗಳು ವರದಿಯಾಗಿದ್ದು, 109 ಜನರು ಅಸುನೀಗಿದ್ದಾರೆ. ಇದರಿಂದ ಇಲ್ಲಿಯವರೆಗೂ ರಾಜ್ಯದಲ್ಲಿ 30.39 ಲಕ್ಷ ಜನರಲ್ಲಿ ಕೋವಿಡ್‌ ಕಾಣಿಸಿಕೊಂಡಿದ್ದರೆ, 14,380 ಜನರು ಮೃತಪಟ್ಟಂತಾಗಿದೆ.

ಅನ್‌ಲಾಕ್‌ನಿಂದಾಗಿ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ನಿರೀಕ್ಷೆಯಿದೆ ಎಂದು ಆರೋಗ್ಯ ಸಚಿವ ವೀಣಾ ಜಾರ್ಜ್‌ ಹೇಳಿದ್ದಾರೆ.

ಇದರ ನಡುವೆ ರಾಜ್ಯದಲ್ಲಿ 14 ಝೀಕಾ ವೈರಸ್‌ ಪ್ರಕರಣಗಳು ವರದಿಯಾಗಿವೆ. ಈ ಸಮಯದಲ್ಲಿ ಪರಿಸ್ಥಿತಿ ನಿಭಾಯಿಸಲು ಅಗತ್ಯ ಸಲಹೆಯನ್ನು ರಾಜ್ಯ ಸರ್ಕಾರಕ್ಕೆ ನೀಡಲು ಕೇಂದ್ರದ ತಂಡ ಬರಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.